ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮರಿ ಬಬಿಯಾನ ದರ್ಶನ

ಮಂಗಳೂರು:ಸರೋವರ ಕ್ಷೇತ್ರ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ-3 ಹೆಸರಿನ ಮೊಸಳೆ ಮರಿ ಇಲ್ಲಿನ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಜೂನ್ 14ರ ಸಂಜೆ ಸಂಪೂರ್ಣ ದರ್ಶನ ನೀಡಿತು.

 

ಬಬಿಯಾ-3 ಹೆಸರಿನ ಮೊಸಳೆ ಮರಿ ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಕಲ್ಲಿನ ಮೇಲೆ ವಿಶ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿದ್ದು. ಈ ವೇಳೆ ದೇವಸ್ಥಾನ ಬಂದ್ ಆಗಿತ್ತು, ಸಂಜೆ ವೇಳೆಗೆ ಆಗಮಿಸಿದ ದೇವಸ್ಥಾನದ ಅರ್ಚಕರು ಫೋಟೋ ತೆಗೆದು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.

ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ ಕಾಲ ವಾಸಿಸುತ್ತಿದ್ದ ಮೂಲ ಬಬಿಯಾ ಮೊಸಳೆ 2022ರ ಅಕ್ಟೋಬರ್ 9 ರಂದು ಸಾವನ್ನಪ್ಪಿತು. ಬಬಿಯಾ ಸಾವನ್ನಪ್ಪಿದ ಒಂದು ವರ್ಷದ ನಂತರ, ದೇವಾಲಯದ ಕೊಳದಲ್ಲಿ ಈ ಮೊಸಳೆ ಮರಿ ಕಾಣಿಸಿಕೊಂಡಿದೆ. ಆದರೆ, ಇದುವರೆಗೆ ಯಾವುದೇ ಭಕ್ತರು ಈ ಮೊಸಳೆ ಮರಿಯ ಸಂಪೂರ್ಣ ದರ್ಶನ ಪಡೆದಿರಲಿಲ್ಲ.

 

 

LEAVE A REPLY

Please enter your comment!
Please enter your name here