ಗೋಮಾಂಸ ಪತ್ತೆ- 11 ಮನೆಗಳು ಧ್ವಂಸ

ಮಧ್ಯಪ್ರದೇಶ/ಮಂಗಳೂರು:  ಮಧ್ಯಪ್ರದೇಶದ ಮಾಂಡ್ಲಾ ಪ್ರದೇಶ ಎಂಬಲ್ಲಿ ಫ್ರಿಡ್ಜ್ ನಲ್ಲಿ ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ 11 ಮನೆಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಈ ಕುರಿತು ಮಾಂಡ್ಲ ಎಸ್ಪಿ ರಜತ್ ಸಕ್ಲೇಚಾ ಮಾತನಾಡಿನಿಯಾನ್ ಪುರದ ಭೈನ್ವಾಹಿ ಪ್ರದೇಶದಲ್ಲಿ ಕಸಾಯಿಗಾಗಿ ದೊಡ್ಡಸಂಖ್ಯೆಯ ಗೋವುಗಳನ್ನು ಹಿಡಿದಿಡಲಾಗಿದೆ ಎಂಬ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಂಡ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.ಅಧಿಕಾರಿಗಳ ತಂಡ ಆ ಪ್ರದೇಶಕ್ಕೆ ಧಾವಿಸಿದಾಗ 150 ಹಸುಗಳನ್ನು ಆರೋಪಿಗಳ ಮನೆಯ ಹಿಂದೆ ಕಟ್ಟಿಹಾಕಿಕೊಂಡಿರುವುದು ಕಂಡುಬಂತು. ಎಲ್ಲ 11 ಆರೋಪಿಗಳ ಮನೆಗಳ ಫ್ರಿಡ್ಜ್ ಗಳಲ್ಲಿ ಗೋಮಾಂಸ ಸಂಗ್ರಹಿಸಿದ್ದುದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಯ ಕೊಬ್ಬು, ಜಾನುವಾರುಗಳ ಚರ್ಮ ಮತ್ತು ಎಲುಬು ಕೂಡಾ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ” ಎಂದು ವಿವರಿಸಿದ್ದಾರೆ.

ವಶಪಡಿಸಿಕೊಂಡ ಮಾಂಸ ಗೋಮಾಂಸ ಎಂದು ಸ್ಥಳೀಯ ಸಂಸ್ಥೆಯ ಪಶುತಜ್ಞರು ದೃಢಪಡಿಸಿದ್ದಾರೆ. ಇದರ ಪೂರಕ ಡಿಎನ್ಎ ವಿಶ್ಲೇಷಣೆಗೆ ಮಾದರಿಯನ್ನು ಹೈದರಾಬಾದ್ ಗೆ ಕಳುಹಿಸಲಾಗಿದೆ. ಎಲ್ಲ 11 ಆರೋಪಿಗಳು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಇದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮಾಂಸ ವಶಪಡಿಸಿಕೊಂಡ ಬಳಿಕ ಶುಕ್ರವಾರ ರಾತ್ರಿ ಎಫ್ಐಆರ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇತರ 10 ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. 150 ಹಸುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಭೈನ್ಸವಾಹಿ ಪ್ರದೇಶ ಗೋವಧೆಯ ಕೇಂದ್ರವಾಗುತ್ತಿದೆ. ಮಧ್ಯಪ್ರದೇಶದಲ್ಲಿ ಗೋವಧೆಗಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಕ್ಲೇಚಾ ವಿವರ ನೀಡಿದ್ದಾರೆ.

LEAVE A REPLY

Please enter your comment!
Please enter your name here