ಕರ್ತವ್ಯದ ಸ್ಥಳದಲ್ಲಿ ಒಂದು ಬಾರಿಯ ಲೈಂಗಿಕ ದೌರ್ಜನ್ಯವೂ ನಿರಂತರ ಅಪರಾಧ ಕೃತ್ಯ – ಮದ್ರಾಸ್ ಹೈಕೋರ್ಟ್‌

ಮಂಗಳೂರು/ಮದ್ರಾಸ್: ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಅದನ್ನು ನಿರಂತರ ಸ್ವರೂಪದ ಅಪರಾಧ ಕೃತ್ಯ ಎಂದು ಪರಿಗಣಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಮದ್ರಾಸ್ ಹೈಕೋರ್ಟ್‌ನ ನ್ಯಾ. ಡಿ. ಭರತ್ ಚಕ್ರವರ್ತಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಕೆಲಸದ ಸ್ಥಳದಲ್ಲಿ ಒಂದು ಬಾರಿಗೆ ಲೈಂಗಿಕ ಕಿರುಕುಳ ನಡೆದಿದ್ದರೂ ಅದು ಗಂಭೀರ ಸ್ವರೂಪದ್ದಾಗಿದ್ದು, ಸಂತ್ರಸ್ತರ ಮನಸ್ಸಿನಲ್ಲಿ ಸದಾ ಆಘಾತ ಮತ್ತು ಭಯ ಉಂಟು ಮಾಡುತ್ತಿದ್ದರೆ ಅಂತಹ ಕೃತ್ಯವನ್ನು ನಿರಂತರ ಅಪರಾಧ ಎಂದೇ ಪರಿಗಣಿಸಬೇಕು ಎಂದು ತೀರ್ಪು ಹೇಳಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಪರಾಧವನ್ನು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆಯ ಸೆಕ್ಷನ್ 9ರ ಅಡಿ ಆರು ತಿಂಗಳ ಅವಧಿಗಷ್ಟೇ ಸೀಮಿತಗೊಳಿಸಬಾರದು ಎಂದು ತೀರ್ಪು ಸ್ಪಷ್ಟಪಡಿಸಿದೆ.

ಕೆಲಸದ ಸ್ಥಳದಲ್ಲಿ ನಡೆಯುವ ಬಹುತೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ದೂರು ನೀಡಿ ಅಪಾಯ ಎದುರಿಸಬೇಕೆ..? ತನ್ನ ಸುತ್ತಲೂ ಇರುವವರಿಂದ ದ್ವಿತೀಯ ಸಂತ್ರಸ್ಥರಾಗಿ ಇರಬೇಕೆ? ಇಲ್ಲವೇ ಅಂತಹ ದೂರು ನೀಡದೆ ಮೌನ ವಹಿಸಬೇಕೆ? ಎಂಬ ಸಂದಿಗ್ಧತೆಯನ್ನು ದೂರು ದಾರರು ಎದುರಿಸುತ್ತಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಎಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಿಲ್ಲ ಎಂಬ ಆರೋಪಿತರ ಅರ್ಜಿದಾರರ ವಾದ ಮನ್ನಿಸಿದ ನ್ಯಾಯಾಲಯ, ಅದೇ ಆಂತರಿಕ ತನಿಖಾ ಸಮಿತಿ ಪುನಾರಚನೆಯಾಗಿ ಸಾಕ್ಷಿಗಳ ಪಾಟಿ ಸವಾಲಿಗೆ ಸಂಬಂಧಿಸದಿಂತೆ ಅರ್ಜಿದಾರರ ಅಹವಾಲುಗಳನ್ನು ಪರಿಹರಿಸುವಂತೆ ಸೂಚಿಸಿತು.

LEAVE A REPLY

Please enter your comment!
Please enter your name here