ಉದ್ಯೋಗ ನೀಡುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಯುವತಿಯರ ಮೇಲೆ ಅತ್ಯಾಚಾರ – ದೌರ್ಜನ್ಯದ ವಿಡಿಯೋ ವೈರಲ್

ಮಂಗಳೂರು/ಬಿಹಾರ: ಬಿಹಾರದಲ್ಲಿ 200ಕ್ಕೂ ಹೆಚ್ಚು ಯುವತಿಯರನ್ನು ಕೂಡಿ ಹಾಕಿ, ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗಿದ್ದು,  ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಯುವತಿಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ, ಲೈಂಗಿಕವಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಉದ್ಯೋಗದ ಹೆಸರಿನಲ್ಲಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಯುವತಿಯರನ್ನು ಉದ್ಯೋಗ ನೀಡುತ್ತೇವೆ ಎಂದು‌ ಜಾಹೀರಾತು ನೀಡಿ ವಂಚಿಸಿ ತಿಂಗಳುಗಳ ಕಾಲ ಬಂಧಿಯಾಗಿಸಿ, ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅನೇಕ ಬಾರಿ ಅವರ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಕಲಿ ಏಜೆಂಟ್​​​ಗಳು ನಡೆಸುತ್ತಿದ್ದ ನಕಲಿ ಸಂಸ್ಥೆಯ ಒಂಬತ್ತು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಒಂಬತ್ತು ಮಂದಿಯೂ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. 

ದೂರುದಾರರು ಉದ್ಯೋಗದ ಜಾಹೀರಾತು ನೋಡಿ, ಮುಜಾಫರ್‌ಪುರಕ್ಕೆ ಬಂದಾಗ ಅವಳನ್ನು ಮೊದಲು ಕೋಣೆಯಲ್ಲಿ ಇರಿಸಲಾಗಿತ್ತು. ಆ ಕೋಣೆಯಲ್ಲಿ ಇನ್ನೂ ಹಲವಾರು ಯುವತಿಯರೂ ಇದ್ದರು. ಅಲ್ಲಿಂದ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆ ಯುವತಿಯರಿಗೆ  ಒಂಬತ್ತು ಮಂದಿ ಆರೋಪಿಗಳು ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರ ಜತೆಗೆ ಅವರು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾರೆ. ದೂರುದಾರೇ ಸೇರಿ ಅನೇಕರು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಆಕೆಯ ದೂರು ಸ್ವೀಕರಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಆಕೆ ಕೋರ್ಟ್​​​ ಮೊರೆ ಹೋಗಿದ್ದಳು. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ.

ದೂರುದಾರರ ಹೇಳಿಕೆ ಹಾಗೂ ಈ ಜಾಲಕ್ಕೆ ಬಲಿಯಾದ ಅನೇಕರ ದೂರನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಜೂನ್ 2022ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಜಾಹೀರಾತುಗಳನ್ನು ನೀಡಿ, ಮುಜಾಫರ್‌ಪುರಕ್ಕೆ ಭೇಟಿ ನೀಡಿದ್ದರು ಎಂದು ಉಪ ಎಸ್ಪಿ ವಿನಿತಾ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here