ಮಂಗಳೂರು: ಕೇಂದ್ರ ಸರಕಾರದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನ ವರಿಷ್ಠ ನಾಯಕ ರಾಹುಲ್ ಗಾಂಧಿ ಬಗ್ಗೆ ಮತ್ತು ಹಿಂಸೆಗೆ ಪ್ರಚೋದನೆ ಹೇಳಿಕೆ ನೀಡಿರುವ ಶಾಸಕ ಡಾ.ಭರತ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ.
ಜು.10ರಂದು ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂಸತ್ ನಲ್ಲಿ ಸಂವಿಧಾನಿಕವಾದ ಅಗ್ರಸ್ಥಾನವನ್ನು ಹೊಂದಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿರುವ ಭರತ್ ಶೆಟ್ಟಿಯ ವಿರುದ್ಧ ಗೃಹ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು. ಡಾ.ಭರತ್ ಶೆಟ್ಟಿ ಕರಾವಳಿಯ ಶಾಸಕರು ಮುಜುಗರ ಪಡುವ ರೀತಿಯ ಭಾಷೆಯಲ್ಲಿ ಏಕವಚನದಲ್ಲಿ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ಕರಾವಳಿಯ ಹೊಡಿ, ಬಡಿ, ಪೊಲೀಸರ ಕಾಲರ್ ಹಿಡಿ ಎನ್ನುವ ರೀತಿ ಮಾತನಾಡುವ ಶಾಸಕರ ಸಾಲಿಗೆ ಡಾ.ಭರತ್ ಶೆಟ್ಟಿ ಸೇರಿದ್ದಾರೆ. ರಾಹುಲ್ ಗಾಂಧಿ ಯಾರನ್ನು ಅವಮಾನಿಸುವ ರೀತಿ ಏಕವಚನದಲ್ಲಿ ಮಾತನಾಡಿಲ್ಲ. ಹಿಂದೂ ಧರ್ಮ ಹಿಂಸೆಗೆ ಬೆಂಬಲ ನೀಡಿವುದಿಲ್ಲ. ಅದು ಕೇವಲ ಬಿಜೆಪಿ, ಆರ್ ಎಸ್ ಎಸ್ ನವರಿಗೆ ಮಾತ್ರ ಸೇರಿದ ಧರ್ಮ ವಲ್ಲ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ನಲ್ಲಿ ಸಂವಿಧಾನದ ದತ್ತವಾದ ಅಗ್ರ 7ನೇ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಸಂಸತ್ ನಲ್ಲಿ ನೀಡಿರುವ ಹೇಳಿಕೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ದೇಶದ ನಿರುದ್ಯೋಗ, ಭ್ರಷ್ಟಾಚಾರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡದೆ ದೇಶದಲ್ಲಿ ಸಂವಿಧಾನ ನೀಡಿರುವ ಉನ್ನತ ಸ್ಥಾನದಲ್ಲಿರುವ 5 ಬಾರಿ ಸಂಸದರಾಗಿರುವ ರಾಹುಲ್ ಗಾಂಧಿಗೆ ಮಾಡಿರುವ ಅವಮಾನ. ಭರತ್ ಶೆಟ್ಟಿ ಅವರನ್ನು ಮೀರಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಭರತ್ ಶೆಟ್ಟಿ ತನ್ನ ಕ್ಷೇತ್ರದಲ್ಲಿ ಇರುವ ಒಬ್ಬ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವುದಾಗಿ ಮಂಜುನಾಥ ಭಂಡಾರಿ ಹೇಳಿದರು. ಇದೇ ವೇಳೆ ಮಂಗಳೂರಿನ ದರೋಡೆ ನಡೆಸಿದ ತಂಡವನ್ನು ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರನ್ನು ಮಂಜುನಾಥ ಭಂಡಾರಿ ಅಭಿನಂದಿಸಿದರು.
ದೇಶದ ಲೋಕಸಭಾ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಶಾಸಕ ಡಾ.ಭರತ್ ಶೆಟ್ಟಿ ನೀಡಿರುವ ಅನುಚಿತ ಹೇಳಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ವತಿಯಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲಾಗುವುದು. ರಾಹುಲ್ ಹೇಳಿಕೆಯನ್ನು ಶಂಕರಾಚಾರ್ಯರು ಬೆಂಬಲಿಸಿದ್ದಾರೆ. ಹಿಂದೂ ಧರ್ಮ ಉಳಿದಿರುವುದು ಅದರ ತತ್ವ ಆದರ್ಶಗಳಿಂದ ಹೊರತು ಆರ್ ಎಸ್ ಎಸ್, ಬಿಜೆಪಿಯಿಂದ ಅಲ್ಲ. ಭರತ್ ಶೆಟ್ಟಿ ತನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ವೈದ್ಯ ವೃತ್ತಿಯಲ್ಲಿಯೂ ಮುಂದಯವರಿಯಲು ಯೋಗ್ಯರಲ್ಲ. ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಎ.ಭಾವ, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ಪ್ರವೀಣ್ ಚಂದ್ರ ಆಳ್ವ, ಲಾರೆನ್ಸ್ ಡಿ ಸೋಜಾ, ಸುಹಾನ್ ಆಳ್ವ, ಅನಿಲ್ ಕುಮಾರ್ ಪೂಜಾರಿ, ನಿರಾಜ್ ಚಂದ್ರಪಾಲ್, ಟಿ ಕೆ ಸುಧೀರ್ ಉಪಸ್ಥಿತರಿದ್ದರು.