ನಾಪತ್ತೆಯಾಗಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆ- ಲವ್‌ ಜಿಹಾದ್‌ ಆರೋಪ

ಮಂಗಳೂರು: ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ಪತ್ತೆಯಾಗಿದ್ದಾಳೆ.

 

ಮಹಮ್ಮದ್ ಅಶ್ವಕ್ ಎಂಬಾತ ಹುಡುಗಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ತಿಳಿದುಬಂದಿದ್ದು, ನಾಪತ್ತೆಯಾಗಿದ್ದ ಯುವತಿಯನ್ನು ಪಾಂಡೇಶ್ವರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಹಮ್ಮದ್ ಅಶ್ವಕ್‌ ಗೆ ಈಗಾಗಲೇ ಮದುವೆಯಾಗಿದ್ದು, ಈತನ ವಿರುದ್ದ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಕೇಸು ದಾಖಲಾಗಿದೆ ಎನ್ನಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಯುವತಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿರುವ ಬಗ್ಗೆ ಯುವತಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ.ಯುವತಿಯನ್ನು ಸದ್ಯ ಪ್ರಜ್ಞಾ ಸಲಹಾ ಕೇಂದ್ರದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here