ಮಂಗಳೂರು: ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸುವ ಮೂಲಕ ಸಂವಿಂಧಾನದಲ್ಲಿ ಅಡಕವಾಗಿರುವ ನಾಗರಿಕ ಹಕ್ಕನ್ನು ಕಸಿದುಕೊಂಡಿದ್ದಾರೆ. ಇವರ ಈ ನಡೆಯನ್ನು ಬಲವಾಗಿ ಖಂಡಿಸುತ್ತೇವೆ, ಇವರ ಈ ನಿರ್ಧಾರದ ಹಿಂದೆ ಯಾರೋ ಪ್ರಭಾವಿಗಳ ಒತ್ತಡವಿರುವುದು ಭಾಸವಾಗುತ್ತದೆ ಎಂದು ಹಿಂದೂ ಮಹಿಳಾ ಸುರಕ್ಷಾ ಸಮಿತಿ ಪ್ರಮುಖರಾದ ಶ್ರೀಲಕ್ಷ್ಮಿ ಮಠದಮೂಲೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮತಾಂತರ, ಲವ್ ಜಿಹಾದ್ ಭಯೋತ್ಪಾದನೆ, ಡ್ರಗ್ ಮಾಫಿಯಾ ಇವುಗಳ ವಿರುದ್ಧ ಜಾಗೃತ ಸಂಘಟಿತ ಹಿಂದೂ ಸಮಾಜ – ಹಿಂದೂ ಮಹಿಳಾ ಸುರಕ್ಷಾ ಸಮಿತಿಯ ನೇತೃತ್ವದಲ್ಲಿ ಜು.15ರಂದು ಮಂಗಳೂರು ತಾಲೂಕು ಕಚೇರಿಯ ಎದುರುಗಡೆ, ಹಿಂದೂ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶಕ್ಕಾಗಿ ಪ್ರತಿಭಟನಾ ಸಭೆಯನ್ನು ನಡೆಸುವರೆ ನಿಶ್ಚಯಿಸಿದ್ದೆವು. ಅನುಮತಿಗೋಸ್ಕರ ಮಂಗಳೂರು ಮಹಾನಗರ ಪೊಲೀಸ್ ಕಮಿಷನರ್ ರವರನ್ನು ಸಂಪರ್ಕಿಸಿದ್ದೆವು. ಪ್ರತಿಭಟನೆಯ ಬಗ್ಗೆ ಅವರಿಗೆ ವಿವರಿಸಲಾಗಿತ್ತು. ಆದರೆ ಪೂರ್ವಗ್ರಹ ಪೀಡಿತರಾದ ಕಮಿಷನರ್ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು, ಕಾಸರಗೋಡು, ಉಡುಪಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು, ಪ್ರೀತಿ ಪ್ರೇಮ ಸ್ನೇಹ ಎಂಬ ನಾಟಕವಾಡಿ ಹೆಣ್ಣುಮಕ್ಕಳನ್ನು ಅವರಿಗೆ ಅರಿವಿಲ್ಲದಂತೆ ನಕಲಿ ಪ್ರೇಮ ಪಾಶಕ್ಕೆ ಬೀಳುವಂತೆ ನಾಟಕ ಮಾಡಿ ಅದರಲ್ಲಿ ಮತಾಂಧರು ಯಶಸ್ವಿ ಸಾಧಿಸಲು ಯತ್ನಿಸುತ್ತಿರುವುದುಗಂಭೀರ ವಿಚಾರವಾಗಿದೆ. ಈ ತರಹದ ಮತಾಂಧ ಶಕ್ತಿಗಳು ಭಾರತದ ಅಂತರಿಕ ಭದ್ರತೆಗೆ ಕೂಡ ಸವಾಲಾಗಿರುತ್ತಾರೆ. ಜಾಗೃತ ಹಿಂದೂ ಸಮಾಜವು ಮುಂದಿನ ದಿನಗಳಲ್ಲಿ ಸಮಾಜದ ರಕ್ಷಣಾತ್ಮಕ ಯೋಜನೆಗಳನ್ನು ತಾನೇ ಮಾಡಿಕೊಳ್ಳಲಿದೆ. ಹಿಂದೂ ಹೆಣ್ಣುಮಕ್ಕಳಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ನಿರಂತರವಾಗಿ ಹೋರಾಟವನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಹರೀಶ್ ಕುಮಾರ್, ಸುಕನ್ಯಾ ರಾವ್, ಪುನೀತ್ ಅತ್ತಾವರ ಉಪಸ್ಥಿತರಿದ್ದರು.