ಶಿವಲಿಂಗಕ್ಕೆ ಸುತ್ತಿಕೊಂಡ ನೈಜ ನಾಗರಹಾವು – ಶ್ರೀಶೈಲ ದೇವಸ್ಥಾನದಲ್ಲೊಂದು ವಿಸ್ಮಯಕಾರಿ ಪವಾಡ

ಮಂಗಳೂರು/ಶ್ರೀಶೈಲ: ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ನಿಜವಾದ ನಾಗರಹಾವು ಸುತ್ತಿಕೊಂಡಿರುವ ವಿಸ್ಮಯಕಾರಿ ವಿಡಿಯೋ ಹೊರಬಿದ್ದಿದೆ. ಶ್ರೀಶೈಲಂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಈ ಪವಾಡ ಸಂಭವಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ಇಂದು(ಜು.16) ಬೃಹತ್ ನಾಗರಹಾವು ಕಾಣಿಸಿಕೊಂಡಿದೆ. ಈ ದೇವಾಲಯದಲ್ಲಿರುವ ಶಿವಲಿಂಗದ ಸುತ್ತಲೂ ಹಾವು ಸುತ್ತುವರೆದಿರುವುದು ಭಕ್ತರನ್ನು ಆಶ್ಚರ್ಯಕ್ಕೆ ತಳ್ಳಿದೆ.  ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಾಳ ಗಂಗೆಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಕೆಲವು ಭಕ್ತರು ಇದನ್ನು ಚಿತ್ರೀಕರಿಸಿದ್ದು ವೀಡಿಯೋ ವೈರಲ್ ಆಗಿದೆ. ಇಂದು ಬೆಳಗ್ಗೆ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದ್ದು ಪೂಜೆಯ ಬಳಿಕ ದೊಡ್ಡ ನಾಗರಹಾವು ಅಲ್ಲಿಗೆ ಬಂದು ಚಂದ್ರಲಿಂಗದ ಸುತ್ತಲೂ ಮಲಗಿರುವುದು ಕಂಡುಬಂದಿದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಶ್ರೀಶೈಲ ಭಕ್ತರು ಸೇರಿದ್ದರು. ದೇಗುಲದ ಆವರಣದಲ್ಲಿ ಹಾವುಗಳು ಹೆಚ್ಚಾಗಿ ಓಡಾಡುತ್ತಿರುತ್ತವೆ, ಆದರೆ ಇದುವರೆಗೂ ಈ ರೀತಿಯ ಘಟನೆ ನಡೆದಿಲ್ಲ ಎನ್ನುತ್ತಾರೆ ಭಕ್ತರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here