ಮಂಗಳೂರು/ಬೆಂಗಳೂರು: ಕನಾಟಕದ ಎಲ್ಲಾ ಖಾಸಗಿ ಕಂಪನಿಗಳ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಶೇ. 100ರಷ್ಟು ಕನ್ನಡಿಗರನ್ನೇ ಭರ್ತಿ ಮಾಡಿಕೊಳ್ಳಬೇಕು ಎಂದು ಕಡ್ಡಾಯಪಡಿಸುವ ಮಸೂದೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಮಂಗಳವಾರ(ಜು.16) ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ.
ಕನ್ನಡ ಭೂಮಿಯಲ್ಲಿ ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿ ಮಾಡದೇ, ಅವರು ಆರಾಮದಾಯಕ ಜೀವನ ಸಾಗಿಸುವಂತೆ ಮಾಡುವ ನಿಟ್ಟಿನಲ್ಲಿ ಇದು ಸರ್ಕಾರದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ. ನಮ್ಮದು ಕನ್ನಡ ಪರ ಸರ್ಕಾರ. ನಮ್ಮ ಆದ್ಯತೆ ಕನ್ನಡಿಗರ ಕಲ್ಯಾಣ ಎಂದು ವಿವರಿಸಿರುವ ಅವರು ಕಾನೂನು ಸಚಿವಾಲಯ ಈ ಸಂಬಂಧದ ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಿದೆ ಎಂದು ಮೂಲಗಳು ಹೇಳಿವೆ.