ಅನಿರೀಕ್ಷಿತ ಬೀಸಿದ ಗಾಳಿ-ಹಾರಿದ ಮೇಲ್ಚಾವಣಿ-ಧರೆಗುರುಳಿದ ವಿದ್ಯುತ್‌ ಕಂಬ

ಮಂಗಳೂರು:ಕಳೆದ ರಾತ್ರಿ  9:30ರ ಸುಮಾರಿಗೆ ಬೀಸಿದ ಭಾರಿ ಸುಂಟರಗಾಳಿಗೆ ಕಾವೂರು ಜಂಕ್ಷನ್ ನಲ್ಲಿರುವ ಕಟ್ಟಡವೊಂದರ ತಗಡು-ಶೀಟಿನ ಮೇಲ್ಚಾವಣಿ ಗಾಳಿಗೆ ಹಾರಿ ಬಿದ್ದಿದೆ.ಇದರಿಂದ ಪರಿಸರದಲ್ಲಿದ್ದ ಕಾರು, ಆಟೋರಿಕ್ಷಾ ,ಬೈಕ್ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದೆ.

ಆದರೆ ಅದೃಷ್ಟವಶಾತ್ ಯಾವುದೇ  ಪ್ರಾಣಹಾನಿ ಸಂಭವಿಸಿಲ್ಲ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಗಾಳಿಯ ರಭಸಕ್ಕೆ ತಗಡು ಶೀಟಿನ ಮೇಲ್ಚಾವಣಿ ಪೈಪು ಕಂಬಗಳ ಸಮೇತ ಹಾರಿ ಬರುವುದನ್ನು ಕಂಡು ಸ್ಥಳದಲ್ಲಿದ್ದವರು  ಓಡಿ ಹೋಗಿರುವ ಕಾರಣ,ನಡೆಯಬಹುದಾಗಿದ್ದ ದುರಂತ ತಪ್ಪಿದೆ.

ಇನ್ನೊಂದೆಡೆ ಬಂಟ್ವಾಳ ತಾಲೂಕಿನ  ಬಿ.ಸಿ ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಬೀಸಿದ ಭಾರೀ ಗಾಳಿಯಿಂದಾಗಿ  ಎರಡು ವಿದ್ಯುತ್ ಕಂಬಗಳು ರಸ್ತೆಗೆ ಮುರಿದು ಬಿದ್ದಿದ್ದು, ಮೊಬೈಲ್‌ ಟವರ್‌, ಅಂಗಡಿ ಹೊಟೇಲ್‌ ಗಳ ನಾಮಫಲಕಗಳು ಧಾರಶಾಹಿಯಾಗಿದೆ. ಇದರಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಮೆಸ್ಕಾಂ ಅಧಿಕಾರಿಗಳು,ಸಿಬ್ಬಂದಿಗಳು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here