ಗುದನಾಳ ಸೇರಿದ 16 ಇಂಚು ಉದ್ದದ ಸೋರೆಕಾಯಿ-ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯರು

ಮಂಗಳೂರು/ ಮಧ್ಯಪ್ರದೇಶ: ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಆತನ ಗುದನಾಳದಲ್ಲಿ  16 ಇಂಚು ಉದ್ದದ ಸೋರೆಕಾಯಿ  ಪತ್ತೆಯಾಗಿದೆ. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರ ತಂಡ ಸೋರೆಕಾಯಿಯನ್ನು ಯಶಸ್ವಿಯಾಗಿ ಹೊರತೆಗೆದಿದೆ. ಈ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ.

 

ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಜುಲೈ 21 ರಂದು ಶಸ್ತ್ರಚಿಕಿತ್ಸೆ ನಡೆದಿದ್ದು, ರೋಗಿ ಈಗ ಅಪಾಯದಿಂದ ಪಾರಾಗಿ, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಡಾ ನಂದಕಿಶೋರ್ ಜಾಧವ್ ನೇತೃತ್ವದ ಶಸ್ತ್ರಚಿಕಿತ್ಸಾ ತಂಡವು ರೋಗಿಯ ಗುದನಾಳದಿಂದ ಸೋರೆಕಾಯಿಯನ್ನು ಹೊರತೆಗೆದಿದೆ ಆದರೆ  ಸೋರೆಕಾಯಿಯ  ವ್ಯಕ್ತಿಯ ದೇಹವನ್ನು ಹೇಗೆ ಪ್ರವೇಶಿಸಿತು ಎಂಬುದು ಇನ್ನೂ ತಿಳಿದುಬಂದಿಲ್ಲ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಸೋರೆಕಾಯಿಯು ರೋಗಿಯ ಆಂತರಿಕ ಪೊರೆಗಳನ್ನು ಛಿದ್ರಗೊಳಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈತ ಈ ರೀತಿ ಕೃತ್ಯಗೈದಿರಬಹುದು ಎಂದು ಅನುಮಾನ ಮೂಡಿದೆ .ರೋಗಿ ಸ್ವತಃ ಈ ಕೃತ್ಯಗೈದಿರುವುದೇ? ಅಥವಾ ಬಲವಂತವಾಗಿ ಬೇರೆ ಯಾರಾದರೂ ಈ ಕೃತ್ಯಗೈದಿರಬಹುದೇ ಎಂಬುದು ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here