ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ ಮಟ್ಟ ಹಾಕಲು ಹಿಂದೂ ಸಂಘಟನೆಗಳ ಒತ್ತಾಯ

ಮಂಗಳೂರು: ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಗಳನ್ನು ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಿ ಗೋಹತ್ಯೆ ಮಾಡುವ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ  ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜು.7ರಂದು  ಬೆಳಿಗೆ, ಕೃಷ್ಣಾಪುರದ ಎಂಟನೇ ಬ್ಲಾಕ್ ನಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆ ಬಗ್ಗೆ, ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಮನೆಯೊಳಗೆ ಗೋವಧೆ ನಡೆಯುತ್ತಿದ್ದುದು ಕಂಡುಬಂದಿತ್ತು. ನೂರಾರು ಕೆ.ಜಿ ಗೋಮಾಂಸ ಹಾಗೂ 19 ಗೋವುಗಳನ್ನು ಪೊಲೀಸರು ವಶಪಡಿಸುವ ಉತ್ತಮ ಕಾರ್ಯ ಮಾಡಿದರೂ ಅಪರಾಧಿಗಳನ್ನು ಬಂಧಿಸದೆ , ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದು ಗೋಮಾಂಸ ಮಾರಾಟಗಾರರಿಗೆ ಇನ್ನಷ್ಟು ಉತ್ತೇಜನ ಸಿಕ್ಕಿದಂತಾಗಿದೆ.ಜು.25ರಂದು ಪ್ರತಿಭಟನಾ ಸಭೆ ಸುರತ್ಕಲ್ ನಲ್ಲಿ ಈ ಕುರಿತು ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತಾದರು ಪೊಲೀಸರು ಆರೋಪಿಗಳನ್ನು ಬಂಧಿಸಿ ಇತರ ಕಸಾಯಿ ಖಾನೆಗಳನ್ನು ಶೀಘ್ರದಲ್ಲಿ ಮುಚ್ಚಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಸಂಘಟನೆಯ ಮುಖಂಡರು ಗೋ ಹತ್ಯೆ, ಅಕ್ರಮ ಗೋಸಾಗಾಟದ ಬಗ್ಗೆ, ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು
ಮಟ್ಟ ಹಾಕದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಸಂಘಟನೆ ಮುಖಂಡರು ಕೆಲವೊಂದು ಅಂಶಗಳನ್ನು ಪೊಲೀಸರ ಮುಂದಿಟ್ಟಿದ್ದು ತನಿಖೆಗೆ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್‌ ಸುರತ್ಕಲ್‌ ಪ್ರಖಂಡದ ಅಧ್ಯಕ್ಷ ಭಾಸ್ಕರ್‌ ರಾವ್‌ ಬಾಳ, ಕಾರ್ಯದರ್ಶಿ ಜಯರಾಮ್‌ ಆಚಾರ್ಯ ,ಬಜರಂಗದಳದ ಜಿಲ್ಲಾ ಸಹಸಂಯೋಜಕ್ ಪ್ರೀತಮ್‌ ಕಾಟಿಪಳ್ಳ, ಹಿಂಜಾವೇ ಕಾರ್ಯಕಾರಿಣಿ ಸದಸ್ಯ ಬಾಲಕೃಷ್ಣ ಮುಂಚೂರು, ಜಿಲ್ಲಾ ಸಮಿತಿ ಸದಸ್ಯ ಪುಷ್ಪರಾಜ್‌ ಕುಳಾಯಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here