ಎ.1ರಿಂದ ಚಿನ್ನ ಮಾರಾಟಕ್ಕೆ ಆರು ಸಂಖ್ಯೆ ಹಾಲ್ಮಾರ್ಕ್ ಕಡ್ಡಾಯ
ನವದೆಹಲಿ: ಚಿನ್ನಾಭರಣ ಖರೀದಿಯಲ್ಲಿ ವಂಚನೆ ತಪ್ಪಿಸಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಭಾರತ ಸರಕಾರ ಹಾಲ್ ಮಾರ್ಕ್ ನಲ್ಲಿ 6 ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ. ಇದು ಎ. 1ರಿಂದ ಜಾರಿಗೆ ಬರಲಿದೆ.
ಬಿಸಿಲಿನ ತಾಪ- ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಡಿ ಸಿ ಸೂಚನೆ
ಮಂಗಳೂರು: ದ.ಕ ಜಿಲ್ಲೆಯಲ್ಲಿ ಬಿಸಿಲಿನ ಗಾಳಿಯ ತಾಪ ಹೆಚ್ಚುತ್ತಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ಹಿನ್ನಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಕಟ್ಟು ನಿಟ್ಟಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಖಡಕ್ ನಿರ್ದೇಶನ ನೀಡಿದ್ದಾರೆ.
ಶಾಲಾ ಪ್ರವಾಸದ ವಾಹನ ಪಲ್ಟಿ – 10 ವಿದ್ಯಾರ್ಥಿಗಳಿಗೆ ಗಾಯ
ಚಿಕ್ಕ ಮಗಳೂರು: ಕಲಬುರುಗಿ ಜಿಲ್ಲೆಯ ಅಬ್ಝಲ್ ಪುರದ ಶಾಲೆಯ ವಿದ್ಯಾರ್ಥಿಗಳು ಕ್ರೂಸರ್ ವಾಹನದಲ್ಲಿ ಪ್ರವಾಸ ಮುಗಿಸಿ ಹಿಂದಿರುಗುವ ವೇಳೆ ಅಜ್ಜಂಪುರ ತಾಲೂಕಿನ ತಮ್ಮಟದ ಹಳ್ಳಿ ಗೇಟ್ ಬಳಿ ಕಾರೊಂದಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿದ್ಯಾರ್ಥಿಗಳನ್ನು ಅಜ್ಜಂಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಮೇಶ್ ಪಾಲ್ ಹತ್ಯೆ ಗ್ಯಾಂಗ್ ನ ಶೂಟರ್ ಎನ್ ಕೌಂಟರ್ ಗೆ ಬಲಿ
ಲಕ್ನೋ: ಬೆಳವಣಿಗೆಯೊಂದರಲ್ಲಿ ವಿಶೇಷ ಕಾರ್ಯಚರಣೆ ಪಡೆ ಮತ್ತು ಕೌಧಿಯಾರ ಪೊಲೀಸರ ಜಂಟಿ ತಂಡವು ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಆತೀಕ್ ಅಹಮ್ಮದ್ ಗ್ಯಾಂಗ್ ನ ಶೂಟರ್ ನನ್ನು ಮಾ.6ರ ಬೆಳಿಗ್ಗೆ ಪ್ರಯಾಗ್ ರಾಜ್ ಜಿಲ್ಲೆಯ ಕೌಧಿಯಾರ ಪ್ರದೇಶದ ಬಳಿ ಎನ್ ಕೌಂಟರ್ ಮಾಡಿ ಹೊಡೆದುರುಳಿಸಿದೆ.
ಉದ್ಯಮಿ ಆಶಿತ್ ಕುಮಾರ್ ನದಿಗೆ ಹಾರಿ ಆತ್ಮಹತ್ಯೆ
ಮಂಗಳೂರು: ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿ ಪಟ್ನ ಗ್ರಾಮದ ಕೇಳದ ಪೇಟೆಯವರಾಗಿದ್ದ ಉದ್ಯಮಿ ಆಶಿತ್ ಕುಮಾರ್ (51) ಮಾ.5ರಂದು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಖಾಸಗೀ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಮಂಗಳೂರಿನಲ್ಲಿ ನೆಲೆಸಿದ್ದ ಆಶಿತ್ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ, ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.