1. ಎ.1ರಿಂದ ಟೋಲ್ ದರದಲ್ಲಿ ಹೆಚ್ಚಳ ಸಾಧ್ಯತೆ
ನವದೆಹಲಿ: ಮುಂದಿನ ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇ ಗಳಲ್ಲಿ ವಾಹನ ಸಂಚಾರ ದುಬಾರಿಯಾಗಲಿದೆ.
ಎ.1ರಿಂದ ಟೋಲ್ ಶುಲ್ಕವನ್ನು ಏರಿಕೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ದತೆ ನಡೆಸಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯದ ಒಪ್ಪಿಗೆ ದೊರೆತ ಬಳಿಕ ಎ.1ರಿಂದ ಪರಿಷೃತ ಟೋಲ್ ದರ ಜಾರಿಗೆ ಬರಲಿದ್ದು, ಶೇಕಡ 5ರಿಂದ 10ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ.
2. ಯಶಸ್ವಿ ಕ್ಷಿಪಣಿ ಪರೀಕ್ಷೆ – ನೌಕಾ ಪಡೆಗೆ ಹೆಚ್ಚಿದ ಬಲ
ನವದೆಹಲಿ: ಡಿ ಆರ್ ಡಿಓ ವಿನ್ಯಾಸಗೊಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯನ್ನು ಭಾರತೀಯ ನೌಕಾ ಪಡೆಯು ಆರೇಬಿಯನ್ ಸಮುದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ.
ಕೊಲ್ಕತ್ತಾ ವರ್ಗ ನಿರ್ದೇಶಿತ ಕ್ಷಿಪಣಿ ವಿನಾಶಕ ಯುದ್ದ ನೌಕೆಯಿಂದ ಇದನ್ನು ಪರೀಕ್ಷಿಸಲಾಯಿತು. ಇದರಿಂದ ಆತ್ಮ ನಿರ್ಭರ ಭಾರತದ ನೌಕಾ ಪಡೆಯ ಬಲ ಇಮ್ಮಡಿಯಾಗಿದೆ.
3. ಅತ್ಯಂತ ಎತ್ತರದ ಕಟ್ಟಡ ಏರಿದ ಜ್ಯೋತಿರಾಜ್
ಉಡುಪಿ: ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಮಾ.5ರಂದು ಬರಿಗೈಯ್ಯಲ್ಲಿ ಮಣಿಪಾಲದ 37 ಮಹಡಿಗಳ 120ಮೀ. ಎತ್ತರದ ರಾಯಲ್ ಎಂಬೆಸಿ ವಸತಿ ಸಮುಚ್ಚಯವನ್ನು ಏರುವ ಮೂಲಕ ಸಾಹಸ ಮೆರೆದಿದ್ದಾರೆ.
ಇದು ಜ್ಯೋತಿರಾಜ್ ತನ್ನ ಜೀವಮಾನದಲ್ಲಿ ಬರಿಗೈಯ್ಯಲ್ಲಿ ಏರಿದ ಅತೀ ಎತ್ತರದ ಕಟ್ಟಡವಾಗಿದೆ.
4. ಮಾ.24 ರಿಂದ ಸಾರಿಗೆ ನೌಕರರ ಮುಷ್ಕರ
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮಾ.24ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.
5. ಮೂಸೇವಾಲ ಕೊಲೆ ಆರೋಪಿಗಳ ಹತ್ಯೆ ಮಾಡಿ ಸಂಭ್ರಮಿಸುತ್ತಿರುವ ಖೈದಿಗಳು
ಚಂಡೀಘಡ: ತರ್ನ್ ತರನ್ ಜಿಲ್ಲೆಯ ಗೋಯಿಂಡ್‌ವಾಲ್ ಸಾಹಿಬ್ ಸೆಂಟ್ರಲ್ ಜೈಲಿನ ಖೈದಿಗಳು ಫೆ.26ರಂದು ಜೈಲಿನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಕ ಸಿದು ಮೂಸೇವಾಲ ಹತ್ಯೆಯ ಆರೋಪಿಗಳು ಸಾವನ್ನಪ್ಪಿದ್ದು, ಜೈಲಿನ ಆವರಣದಲ್ಲಿ ಮೃತದೇಹಗಳನ್ನು ಪ್ರದರ್ಶಿಸುತ್ತಿರುವ ಎರಡು ವೀಡಿಯೋ ವೈರಲ್ ಆಗಿದೆ.ಮೊದಲ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ಕೊಂದಿರುವುದಾಗಿ ಬಹಿರಂಗ ಹೇಳಿಕೆಯದ್ದಾಗಿದ್ದರೇ ಎರಡನೇ ವಿಡಿಯೋ ಕೊಲೆಗಳನ್ನು ಸಂಭ್ರಮಿಸುವುದಾಗಿರುತ್ತದೆ. ಈ ಘಟನೆ ಪಂಜಾಬ್ ಪೊಲೀಸರಿಗೆ ತೀವ್ರ ಮುಜುಗರ ಉಂಟು ಮಾಡಿದೆ.