ನವದೆಹಲಿ: ಕ್ರಿಪ್ಟೋ ಕರೆನ್ಸಿ ವ್ಯವಹಾರಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವ್ಯಾಪ್ತಿಗೊಳಪಡಿಸಿ ಕೇಂದ್ರ ಸರಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ.
ಇದರಿಂದಾಗಿ ಡಿಜಿಟಲ್ ಆಸ್ತಿಗಳ ವಲಯದ ಮೇಲಿನ ಹಿಡಿತ ಇನ್ನಷ್ಟು ಬಿಗಿಯಾಗಿದೆ. ಎಲ್ಲಾ ಕ್ರಿಪ್ಟೋ ವ್ಯವಹಾರಗಳಿಗೆ ಸಂಬಂಧಿಸಿದ ವಿನಿಮಯ, ಕಸ್ಟಡಿಯನ್ , ವ್ಯಾಲೆಟ್ ಪೂರೈಕೆದಾರ ಸೇರಿದಂತೆ ಎಲ್ಲವೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅಡಿ ಬರುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.