




ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯ ನಡುವಿನ 4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬೇನಿಸ್ ಗುಜರಾತ್‌ನ ಅಹಮದಾಬಾದ್‌ನ ಕ್ರೀಡಾಂಗಣಕ್ಕೆ ಆಗಮಿಸಿದ್ದು ಇಬ್ಬರನ್ನು ಜೋರಾದ ಹರ್ಷೋದ್ಗಾರ ಮತ್ತು ಚಪ್ಪಾಳೆಯಿಂದ ಸ್ವಾಗತಿಸಲಾಯಿತು. ಎರಡೂ ದೇಶದ ಪ್ರಧಾನಿಗಳು ಗಾಲ್ಫ್ ಕಾರ್ಟ್ ಮಾದರಿಯಲ್ಲಿ ನಿರ್ಮಿಸಲಾಗಿರುವ “ರಥ” ದಲ್ಲಿ ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ನೆರೆದಿದ್ದ ಪ್ರೇಕ್ಷಕರತ್ತ ಕೈಬೀಸಿದರು.






ಪಿಎಂ ಮೋದಿ ಹಾಗೂ ಅಲ್ಬೇನಿಸ್ ಅವರು ತಮ್ಮ ತಂಡದ ನಾಯಕರಾದ ರೋಹಿತ್ ಶರ್ಮಾ ಹಾಗೂ ಸ್ಟೀವ್ ಸ್ಮಿತ್ ಅವರಿಗೆ ಟೆಸ್ಟ್ ಕ್ಯಾಪ್ ಗಳನ್ನು ಹಸ್ತಾಂತರಿಸಿದರು ಮತ್ತು ತಂಡದ ಸದಸ್ಯರಿಗೆ ಹಸ್ತಲಾಘವ ನೀಡಿ ಶುಭ ಹಾರೈಸಿದರು.ಭಾರತದ ಅಹಮದಾಬಾದ್‌ಗೆ ನಂಬಲಾಗದ ಸ್ವಾಗತ ಲಭಿಸಿದೆ. ಆಸ್ಟ್ರೇಲಿಯಾ-ಭಾರತ ಸಂಬಂಧಗಳಿಗೆ ಒಂದು ಪ್ರಮುಖ ಪ್ರವಾಸದ ಪ್ರಾರಂಭ ಇದಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಇಲ್ಲಿಗೆ ಆಗಮಿಸಿದ ಸ್ವಲ್ಪ ಸಮಯದ ನಂತರ ಟ್ವೀಟ್ ಮಾಡಿದ್ದಾರೆ.














