ಪರಾದೀಪ್: ಕ್ಯಾಮೆರಾ ಮತ್ತು ಮೈಕ್ರೊಚಿಪ್ನಂತಿರುವ ಸಾಧನವನ್ನು ಕಾಲಿಗೆ ಕಟ್ಟಿದ್ದ ಪಾರಿವಾಳವೊಂದು ಜಗತ್ಸಿಂಗ್ಪುರ ಜಿಲ್ಲೆಯ ಪರಾದೀಪ್ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯ ಸಿಬ್ಬಂದಿಗಳಿಗೆ ಸಿಕ್ಕಿದ್ದು, ಪಾರಿವಾಳವನ್ನು ಗೂಢಚಾರಿಕೆಗೆ ಬಳಸಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಾರಿವಾಳವು ತಮ್ಮ ದೋಣಿಯ ಮೇಲೆ ಕುಳಿತಿರುವುದನ್ನು ಗಮನಿಸಿದ್ದ ಮೀನುಗಾರರು ಪಾರಿವಾಳವನ್ನು ಸೆರೆ ಹಿಡಿದು ಪರಾದೀಪ್ನ ಕರಾವಳಿ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜಗತ್ಸಿಂಗ್ಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಆರ್.ಆರ್., “ಪಾರಿವಾಳವನ್ನು ಪಶು ವೈದ್ಯರು ಪರೀಕ್ಷಿಸುತ್ತಿದ್ದು, ಅದರ ಕಾಲಿಗೆ ಕಟ್ಟಿರುವ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಿದ್ದೇವೆ ಎಂದು ಹೇಳಿದ್ದಾರೆ. ಸ್ಥಳೀಯ ಪೋಲೀಸರಿಗೆ ಅರ್ಥವಾಗದ ಭಾಷೆಯಲ್ಲಿ ಪಾರಿವಾಳದ ರೆಕ್ಕೆಗಳ ಮೇಲೆ ಏನೋ ಬರೆದಿರುವಂತೆ ಕಾಣಿಸುತ್ತಿದ್ದು ಏನು ಬರೆಯಲಾಗಿದೆ ಎಂಬುದರ ಬಗ್ಗೆ ತಜ್ಞರ ನೆರವು ಪಡೆದು ತಿಳಿಯಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.