ವಾಷಿಂಗ್ಟನ್: ಶೀಘ್ರದಲ್ಲಿಯೇ ಹೊಸ ಸಾಮಾಜಿಕ ಜಾಲತಾಣ ಪರಿಚಯಿಸುವುದಾಗಿ ಫೇಸ್ ಬುಕ್ ಮಾತೃ ಸಂಸ್ಥೆ ಮೆಟಾ ಘೋಷಣೆ ಮಾಡಿದೆ. ಆದರೆ ಅದರ ಸ್ವರೂಪ ಮತ್ತು ವಿಶೇಷತೆಗಳ ಬಗ್ಗೆ ಸಂಸ್ಥೆ ಬಹಿರಂಗ ಪಡಿಸಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಯಿಂದ ಫೇಸ್ಬುಕ್ ಇತ್ತೀಚೆಗೆ ಆಕರ್ಷಣೆ ಕಳೆದುಕೊಳ್ಳುತ್ತಿದ್ದು ಜನ ಬೇರೆ ಸಾಮಾಜಿಕ ಜಾಲತಾಣಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಮೆಟಾ ಪರಿಚಯಿಸಲಿರುವ ಸಾಮಾಜಿಕ ಜಾಲತಾಣದ ಕುರಿತು ಕುತೂಹಲ ಸೃಷ್ಟಿಯಾಗಿದೆ.