ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಮೃತ್ಯು

ಉಡುಪಿ: ಕಾಪು ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಾ.12ರಂದು ಬೈಕ್ ಮತ್ತು ಆ್ಯಂಬುಲೆನ್ಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಉಚ್ಚಿಲ ನಿವಾಸಿ ರಿತೇಶ್ ದೇವಾಡಿಗ(24 ) ಗಾಯಗೊಂಡಿದ್ದರು.ಗಾಯಗೊಂಡಿದ್ದ ರಿತೇಶ್‌ ಅವರನ್ನು‌ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆಗೆ ಸ್ಪಂದಿಸದೇ ರಿತೇಶ್ ದೇವಾಡಿಗ ತಡ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಆಂಬುಲೆನ್ಸ್ ಮತ್ತು ಉಚ್ಚಿಲದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

LEAVE A REPLY

Please enter your comment!
Please enter your name here