212 ಮೀಟರ್ ಎತ್ತರದಲ್ಲಿರುವ 27 ಮೀಟರ್ ಅಗಲದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆದ ವಿಮಾನ

ಮಂಗಳೂರು: ದುಬೈ ಬುರ್ಜ್ ಅಲ್ ಅರಬ್ ಹೋಟೆಲ್ ನ 27 ಮೀಟರ್ ಅಗಲದ ಹೆಲಿ ಪ್ಯಾಡ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಣ್ಣ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಪೋಲ್ಯಾಂಡ್ ನ ಪೈಲಟ್ ಲ್ಯೂಕ್ ಝೆಫಿಲ ವಿಶ್ವದಾಖಲೆ ಮಾಡಿದ್ದಾರೆ. 650 ಬಾರಿ ಲ್ಯಾಂಡಿಂಗ್ ಮಾಡಲು ಅಭ್ಯಾಸ ನಡೆಸಿದ ಬಳಿಕ ಪೈಲಟ್ ಲ್ಯೂಕ್ ತನ್ನ ವಿಶಿಷ್ಟ ಸಾಧನೆಯಲ್ಲಿ ಸಫಲರಾಗಿದ್ದಾರೆ. ನೆಲದಿಂದ 212 ಮೀಟರ್ ಎತ್ತರದಲ್ಲಿರುವ 27 ಮೀಟರ್ ಅಗಲದ ಹೆಲಿಪ್ಯಾಡ್ ನಲ್ಲಿ ವಿಮಾನ ಲ್ಯಾಂಡ್ ಮಾಡುವ ವಿಡಿಯೋ ವೈರಲ್ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.

 

LEAVE A REPLY

Please enter your comment!
Please enter your name here