ಪ್ರಧಾನಿ ಕಾರ್ಯಾಲಯದ ಹೆಸರಲ್ಲಿ ಹೈಟೆಕ್ ವಂಚನ – ನಿಜವಾಗಿಯೂ ಯಾರಿವನು?

ಮಂಗಳೂರು: ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿ ಎಂದು ಸೋಗು ಹಾಕಿದ ಗುಜರಾತ್ ಮೂಲದ ಕಿರಣ್ ಭಾಯಿ ಪಟೇಲ್ ಎಂಬ ವಂಚಕನೊಬ್ಬ z+ ಭದ್ರತೆ, ಗುಂಡು ನಿರೋಧಕ ಕಾರು, ಪಂಚತಾರ ಹೋಟೆಲ್ ವಾಸ್ತವ್ಯ ಮಾತ್ರವಲ್ಲದೆ ಕೇಂದ್ರ ಸರಕಾರದ ಹೆಚ್ಚಿನ ಎಲ್ಲಾ ಸೌಲಭ್ಯಗಳನ್ನು ಪಡೆದು ಜಮ್ಮು ಕಾಶ್ಮೀರ ಆಡಳಿತವನ್ನು ಭೇಸ್ತು ಬೀಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಎನ್ ಡಿ ಟಿವಿ ಡಾಟ್ ಕಾಂ ವರದಿ ಮಾಡಿದೆ.


ವರ್ಷದ ಆರಂಭದಲ್ಲಿ ಇದೇ ವ್ಯಕ್ತಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದ್ದ ಎಂದು ಹೇಳಲಾಗಿದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ವ್ಯೂಹ ಮತ್ತು ಕಾರ್ಯತಂತ್ರ ವಿಭಾಗದ ಹೆಚ್ಚುವರಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳುತ್ತಿದ್ದರು ಈ ನಕಲಿ ಅಧಿಕಾರಿಯನ್ನು 10 ದಿನಗಳ ಹಿಂದೆ ಬಂಧಿಸಲಾಗಿತ್ತು. ಆದರೆ ಪೊಲೀಸರು ಈ ವಿಷಯವನ್ನು ಗೋಪ್ಯವಾಗಿ ಇಟ್ಟಿದ್ದರು. ಮಾ 16 ರಂದು ಕೋರ್ಟಿಗೆ ಹಾಜರು ಪಡಿಸಿದಾಗ ವಿಷಯ ಬಹಿರಂಗಗೊಂಡಿದೆ.
ಟ್ವೀಟರ್ ಖಾತೆ ಹೊಂದಿರುವ ಈತನನ್ನು ಗುಜರಾತ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿನ್ಹ ಸೇರಿದಂತೆ ಸಾವಿರಾರು ಮಂದಿ ಫಾಲೋ ಮಾಡುತ್ತಿದ್ದಾರೆ. ತನ್ನ ಕಾಶ್ಮೀರ ಭೇಟಿಯ ಹಲವಾರು ಚಿತ್ರಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು ಸೇನಾಪಡೆಯ ಸೈನಿಕರು ಆತನನ್ನು ಸುತ್ತುವರಿದಿರುವುದನ್ನು ಅದರಲ್ಲಿ ಕಾಣುತ್ತಿದೆ. ಗುಪ್ತಚರ ಸಂಸ್ಥೆಗಳು ವಂಚಕನೊಬ್ಬ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದು ಸೋಗು ಹಾಕುತ್ತಿದ್ದಾನೆ ಎಂದು ಪೊಲೀಸರಿಗೆ ಎಚ್ಚರಿಕೆ ರವಾನಿಸಿದ ನಂತರ ಆತನನ್ನು ಶ್ರೀನಗರದ ಹೋಟೆಲೊಂದರಲ್ಲಿ ಬಂಧಿಸಲಾಗಿದೆ. ಈತನನ್ನು ಪತ್ತೆ ಹಚ್ಚುವಲ್ಲಿ ಕರ್ತವ್ಯ ಲೋಪ ಎಸಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿರುವ ಮೂಲಗಳು ತನಿಖೆಯಲ್ಲಿ ಗುಜರಾತ್ ಪೊಲೀಸರು ಭಾಗಿಯಾಗಿದ್ದರು ಎಂದು ಹೇಳಿದೆ. ಸಂಶಯಕ್ಕೆ ಎಡೆಮಾಡಿರುವ ಈ ಘಟನೆಯ ಪೂರ್ಣ ವಿವರ ತನಿಖೆಯ ನಂತರವಷ್ಟೇ ಹೊರಬರಬಹುದು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here