ಚಲಿಸುವ ರೈಲಿನಲ್ಲಿ ಸಾಹಸ:‌ ರೀಲ್ಸ್ ಹುಚ್ಚಿನಿಂದ ತನ್ನ ಕೈ, ಕಾಲು ಕಳೆದುಕೊಂಡ ಮುಂಬೈ ಯುವಕ ಫರ್ಹಾತ್ – ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡ ಮುಂಬೈ ಸೆಂಟ್ರಲ್ ರೈಲ್ವೆ ಅಧಿಕಾರಿಗಳು

ಮಂಗಳೂರು (ಬೆಂಗಳೂರು): ಇತ್ತೀಚೆಗೆ ರೀಲ್ಸ್ ನಂತಹ ಶಾರ್ಟ್ ವಿಡಿಯೊಗಳ ಕ್ರೇಜ್‌ನಿಂದಾಗಿ ಅನೇಕ ಯುವಕ ಯುವತಿಯರು ಎಲ್ಲೆಂದರಲ್ಲಿ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಈಗಿನ ಟ್ರೆಂಡ್ ಆಗಿ ಹೋಗಿದೆ.ಇಂತಹದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು, ರೀಲ್ಸ್ ವಿಡಿಯೊಗಾಗಿ ಚಲಿಸುವ ರೈಲಿನಲ್ಲಿ ಸಾಹಸ ಮಾಡಲು ಹೋಗಿ ಯುವಕನೊಬ್ಬ ತನ್ನ ಎಡಗಾಲು ಹಾಗೂ ಎಡಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ.

ಮುಂಬೈನ ಫರ್ಹಾತ್ ಎಂಬ ಯುವಕ ರೀಲ್ಸ್ ಹುಚ್ಚು ಬೆಳೆಸಿಕೊಂಡಿದ್ದ. ಇದಕ್ಕಾಗಿ ಆತ ಚಲಿಸುವ ರೈಲಿನಲ್ಲಿ ಆಗಾಗ ಸಾಹಸ ಮಾಡುತ್ತಿದ್ದ ಮತ್ತು ಅಂತಹ ವಿಡಿಯೊಗಳನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಈ ವಿಷಯ ಮುಂಬೈನ ಸೆಂಟ್ರಲ್ ರೈಲ್ವೆ ಆರ್‌ಪಿಎಫ್ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದು ವಿಡಿಯೊದಲ್ಲಿರುವ ಫರ್ಹಾತ್ ನನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಹೋದಾಗ ಆತ ಚಲಿಸುವ ರೈಲಿನಲ್ಲಿ ರೀಲ್ಸ್ ಮಾಡಲು ಹೋಗಿ ಕೈ–ಕಾಲು ಕಳೆದುಕೊಂಡು ಮನೆಯಲ್ಲಿ ಮಲಗಿದ್ದನ್ನು ಪೊಲೀಸರು  ದೃಢ ಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಮಸೀದಿ ರೈಲು ನಿಲ್ದಾಣದಲ್ಲಿ ವಿಡಿಯೊಗಳಿಗಾಗಿ ಸಾಹಸ ಮಾಡುವಾಗ ನನಗೆ ಈ ಪರಿಸ್ಥಿತಿ ಬಂತು. ದಯವಿಟ್ಟು ಯಾರೂ ಶಾರ್ಟ್ ವಿಡಿಯೋ ಹುಚ್ಚಿಗಾಗಿ ತೊಂದರೆಗೆ ಸಿಲುಕಬೇಡಿ ಎಂದು ಪೊಲೀಸರ ಸಮ್ಮುಖದಲ್ಲಿ ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿರುವ ಸೆಂಟ್ರಲ್ ರೈಲ್ವೆ, ರೈಲಿನಲ್ಲಿ ಸಾಹಸಗಳನ್ನು ಮಾಡುವುದು ನಿಷಿದ್ಧ ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿ. ಯಾರಾದರೂ ಈ ರೀತಿ ಮಾಡುವುದು ಕಂಡು ಬಂದರೆ ನಮ್ಮ ಗಮನಕ್ಕೆ ತನ್ನಿ ಎಂದು ಸಹಾಯವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ
https://x.com/i/status/1812381994485182839

 

LEAVE A REPLY

Please enter your comment!
Please enter your name here