ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಲಿ ಸಚಿವ ಕೆ.ಸಿ. ನಾರಾಯಣಗೌಡ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬಸವರಾಜ್ ದಡೇಸೂರು, ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲವರನ್ನು ಹೊರತುಪಡಿಸಿ ಆಡಳಿತರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಫಷ್ಟಪಡಿಸಿರುವ ಕಾರಣ ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯುವುದು ಖಚಿತವಾಗಿದೆ.
ಕೊನೆ ಕ್ಷಣದಲ್ಲಿ ಅಚ್ಚರಿ ಬದಲಾವಣೆಗಳು ನಡೆದರೆ, ಹಾಲಿ ಸಚಿವ ಗೋವಿಂದ ಕಾರಜೋಳಗೂ ಟಿಕೆಟ್ ಕೈ ತಪ್ಪುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ, ಇತ್ತೀಚಿಗೆ ಲೋಕಾಯುಕ್ತ ದಾಳಿಗೆ ಸಿಲುಕಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟುಮಾಡಿರುವ ಮಾಡಾಳ್ ವಿರೂಪಾಕ್ಷಪ್ಪಗೂ ಟಿಕೆಟ್ ಕೈ ತಪ್ಪಲಿದ್ದು, ಬದಲಿಗೆ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಲಬಿಸಲಿದೆ ಎನ್ನಲಾಗಿದೆ. ಇನ್ನೂ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ತೀವ್ರ ವಿರೋಧ ಎದುರಿಸುತ್ತಿರುವ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಕನಕಗಿರಿಯ ಬಸವರಾಜ್ ದಡೇಸೂರು, ವಯಸ್ಸಿನ ಕಾರಣದಿಂದ ಎಸ್.ಎ.ರವೀಂದ್ರನಾಥ್ ಗೂ ಟಿಕೆಟ್ ಕೈ ತಪ್ಪಲಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಕಾರಣದಿಂದ ವಿರೋಧಿ ಆಲೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಶಿಗ್ಗಾಂವಿ -ಸವಣೂರು ಜೊತೆಗೆ ದಾವಣಗೆರೆ ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಸಾದರ ಲಿಂಗಾಯಿತರು ಇಲ್ಲಿ ಹೆಚ್ಚಾಗಿರುವ ಕಾರಣ, ಸುರಕ್ಷಿತ ಕ್ಷೇತ್ರವನ್ನು ಆಯ್ಕೆ ಮಾಡುವತ್ತ ಚಿತ್ತ ಹರಿಸಿದ್ದಾರೆ. ಅಪರೇಷನ್ ಕಮಲದಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಬಹುತೇಕ ಎಲ್ಲರಿಗೂ ಟಿಕೆಟ್ ಖಾತರಿಯಾಗಿದೆ. ಆದರೆ, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹೆಗಳು ಕೇಳಿ ಬರುತ್ತಿರುವುದರಿಂದ ಕಾದು ನೋಡುವ ತಂತ್ರ ಅನುಸರಿಸಲಿದೆ. ಉಳಿದಂತೆ ಅಥಣಿಯಲ್ಲಿ ಹಾಲಿ ಶಾಸಕ ಮಹೇಶ್ ಕುಮಟಹಳ್ಳಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರೆ, ಇದೇ ಕ್ಷೇತ್ರಕ್ಕೆ ಮಾಜಿ ಸಚಿವ ಲಕ್ಷ್ಮಣ ಸವದಿ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡುವ ಸಂಭವವಿದೆ. ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಹಾಲಿ ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಫಿಕ್ಸ್ ಎನ್ನಲಾಗಿದೆ.
ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಬಣ ರಾಜಕಾರಣಕ್ಕೆ ಅವಕಾಶ ನೀಡದೆ, ಸಂಘ ಪರಿವಾರ ಮತ್ತು ಪಕ್ಷ ನಿಷ್ಟೆ, ಹಿನ್ನಲೆಯುಳ್ಳರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ಶಿಫಾರಸು ಮಾಡಲಾಗುತ್ತದೆ. ಬಳಿಕ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆಸಿ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
- ಸಂಭಾವ್ಯ ಟಿಕೆಟ್ ವಂಚಿತರು: ಯಡಿಯೂರಪ್ಪ, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ ರವೀಂದ್ರನಾಥ್, ಜಗದೀಶ್ ಶೆಟ್ಟರ್.
- ಟಿಕೆಟ್ ಖಾತರಿ ಇಲ್ಲದವರು: ಎಂ.ಪಿ.ಕುಮಾರಸ್ವಾಮಿ (ಮೂಡಿಗೆರೆ), ಬಸವರಾಜ್ ದಡೆಸೂರು ( ಕನಕಗಿರಿ }, ಶ್ರೀಮಂತ ಪಾಟೀಲ್
- ಸ್ಪರ್ಧೆ ಹೆಚ್ಚಾಗಿರುವ ಕಡೆ ಎರಡು ಹೆಸರು ಶಿಫಾರಸು: ಅಥಣಿ – ಮಹೇಶ್ ಕುಮಟಹಳ್ಳಿ, ಹುಕ್ಕೇರಿ – ರಮೇಶ್ ಕತ್ತಿ ಅಥವಾ ಉಮೇಶ್ ಕತ್ತಿ ಪುತ್ರ, ಬೆಳಗಾವಿ ಗ್ರಾಮೀಣ ಸಂಜಯ್ ಪಾಟೀಲ್ ಅಥವಾ ರಮೇಶ್ ಜಾರಕಿಹೊಳಿ ಆಪ್ತನಿಗೆ ಟಿಕೆಟ್, ಇನ್ನೂ 50 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಸ್ಫಷ್ಟತೆ ಇಲ್ಲದ ಕಾರಣಕ್ಕೆ ಅಳೆದು ತೂಗಿ ಪ್ರಭಾವಿ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
- ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
1 ನಿಪ್ಪಾಣಿ – ಶಶಿಕಲಾ ಜೊಲ್ಲೆ
2 ಚಿಕ್ಕೋಡಿ ಸದಲಗಾ – ಮಹಂತೇಶ್ ಕವಟಗಿಮಠ
3 ಅಥಣಿ – ಮಹೇಶ್ ಕುಮಟ ಅಥವಾ ಈ ಸವಧಿ
4 ಕಾಗವಾಡ – ಶ್ರೀಮಂತ ಪಾಟೀಲ್
5 ಕುಡಚಿ – ಪಿ. ರಾಜೀವ್
6 ರಾಯಭಾಗ-ದುರ್ಯೋಧನ ಐಹೊಳೆ
7 ಹುಕ್ಕೇರಿ – ರಮೇಕ್ಕ ಕತ್ತಿ
8 ಅರಭಾವಿ – ಬಾಲಚಂದ್ರ ಜಾರಕಿಹೊಳಿ
9 ಗೋಕಾಕ್ – ರಮೇಶ್ ಜಾರಕಿಹೊಳಿ
10 ಯಮಕನಮರಡಿ –
11 ಬೆಳಗಾವಿ ಉತ್ತರ – ಅನಿಲ್ ಬೆನಕೆ
12 ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
13 ಬೆಳಗಾವಿ ಗ್ರಾಮೀಣ – ಸಂಜಯ್ ಪಾಟೀಲ್/ ರಮೇಶ್ ಜಾರಕಿಹೊಳಿ ಆಪ್ತ
14 ಖಾನಾಪುರ –
15 ಕಿತ್ತೂರು – ಮಹಾಂತೇಶ್ ದೊಡ್ಡಗೌಡ
16 ಬೈಲಹೊಂಗಲ -ವಿಶ್ವನಾಥ್ ಪಾಟೀಲ್
17 ಸವದತ್ತಿ ಯಲ್ಲಿದ್ದು- ಆನಂದ್ ಮಾಮನಿ ಪತ್ನಿ
18 ರಾಮದುರ್ಗ – ಮಹದೇವಪ್ಪ ಯಾದವಾಡ್
19 ಮುಧೋಳ – ಗೋವಿಂದ ಕಾರಜೋಳ
20 ತೇರದಾಳ – ಸಿದ್ದು ಸವದಿ
21 ಜಮಖಂಡಿ – ಶ್ರೀಕಾಂತ್ ಕುಲಕರ್ಣಿ
22 ಬೀಳಗಿ -ಮುರುಗೇಶ್ ನಿರಾಣಿ
23 ಬಾದಾಮಿ-
24 ಬಾಗಲಕೋಟೆ – ವೀರಣ್ಣ ಚರಂತಿಮ
25 ಹುನಗುಂದ – ದೊಡ್ಡನಗೌಡ ಪಾಟೀಲ್
26 ಮುದ್ದೇಬಿಹಾಳ – ವಿ.ಎಸ್. ಪಾಟೀಲ್ ನಡಹಳ್ಳಿ
27 ದೇವರ ಹಿಪರಗಿ – ಸೋಮನಗೌಡ ಬಿ. ಪಾಟೀಲ್
28 ಬಸವನ ಬಾಗೇವಾಡಿ –
29 ಬಬಲೇಶ್ವರ –
30 ಬಿಜಾಪುರ ನಗರ – ಬಸನಗೌಡ ಪಾಟೀಲ್ ಯತ್ನಾಳ್
31 ನಾಗಠಾಣ
32 ಇಂಡಿ –
33 ಸಿಂಧಗಿ – ರಮೇಶ್ ಬೂಸನೂರು
34 ಅಫಜಲ್ಪುರ – ಮಾಲೀಕಯ್ಯ ಗುತ್ತೇದಾರ್
35 ಜೇವರ್ಗಿ – ದೊಡ್ಡನಗೌಡ ಪಾಟೀಲ್
36 ಸುರಪುರ – ರಾಜುಗೌಡ
37 ಶಹಾಪುರ – ಶಿರುವಾಳ್
38 ಯಾದಗಿರಿ – ವೆಂಕಟ್ ಮುದ್ದಾಳ್
39 ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
40 ಚಿತ್ತಾಪುರ –
41 ಸೇಡಂ – ರಾಜಕುಮಾರ್ ಪಾಟೀಲ್ ತೆಲ್ಲೂರ್
42 ಚಿಂಚೋಳಿ –
43 ಕಲಬುರಗಿ ಗ್ರಾಮಾಂತರ – ಬಸವರಾಜ್ ಮುತ್ತಿಮೂಡ್
44 ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂ
45 ಕಲಬುರಗಿ ಉತ್ತರ –
46 ಆಳಂದ – ಸುಭಾಷ್ ಗುತ್ತೇದಾರ್
47 ಬಸವಕಲ್ಯಾಣ – ಶರಣು ಸಾಲಗಾರ
48 ಹುಮ್ನಾಬಾದ್ –
49 ಬೀದರ್ದಕ್ಷಿಣ –
50 ಬೀದರ್ – ಸೂರ್ಯಕಾಂತ ನಾಗಮಾರಪಲ್ಲಿ
51ಬಾಲ್ಕಿ-
52 ಔರಾದ್ – ಪ್ರಭು ಚವಾಣ್
53 ರಾಯಚೂರು ಗ್ರಾಮೀಣ – ಶಿವರಾಜ್ ಹವಾಲ್ದಾರ್
54 ರಾಯಚೂರು ಡಾ. ಶಿವರಾಜ್ ಪಾಟೀಲ್
55 ಮಾನ್ವಿ – ವಜಪ್ಪ ಮಾನಲ್
56 ದೇವದುರ್ಗ – ಶಿವನಗೌಡ ನಾಯಕ್
57 ಲಿಂಗಣ್ಣೂರು –
58 ಸಿಂಧನೂರು –
59 ಮಸ್ಕಿ – ಪ್ರತಾಪ್ ಗೌಡ ಪಾಟೀಲ್
60 ಕುಷ್ಟಗಿ –
61 ಕನಕಗಿರಿ – ಬಸವರಾಜ ದಡೇಸೂರು
62 ಗಂಗಾವತಿ – ಪರಣ್ಣ ಮುನುವಳ್ಳಿ –
63 ಯಲಬುರ್ಗಾ – ಹಾಲಪ್ಪ ಬಸಪ್ಪ ಆಚಾರ್
64 ಕೊಪ್ಪಳ – ಅಂಬರೀಶ್ ಕರಡಿ, ವಿರೂಪಾಕ್ಷಪ್ಪ
65 ಶಿರಹಟ್ಟಿ – ರಾಮಣ್ಣ ಲಮಾಣಿ
66 ಗದಗ – ಅನಿಲ್ ಮೆಣಸಿನಕಾಯಿ
67 ರೋಣ – ಕಳಕಪ್ಪ ಬಂಡಿ
68 ನರಗುಂದ – ಸಿಸಿ ಪಾಟೀಲ್
69 ನವಲಗುಂದ – ಶಂಕರ ಪಾಟೀಲ್ –
70 ಕುಂದಗೋಳ – ಚಿಕ್ಕನಗೌಡ
71 ಧಾರವಾಡ – ಅಮೃತ್ ದೇಸಾಯಿ
72 ಹುಬ್ಬಳ್ಳಿ ಧಾರವಾಡ ಪೂರ್ವ –
73 ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್ ಶೆಟ್ಟರ್
74 ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ್
75 ಕಲಘಟಗಿ – ಸಿ.ಎಂ. ನಿಬ್ಬಣ್ಣನವರ್ –
76 ಹಳಿಯಾಳ – ಸುನಿಲ್ ನಾಯ್ಕ್
77 ಕಾರವಾರ – ರೂಪಾಲಿ ನಾಯಕ್
78 ಕುಮುಟಾ – ದಿನಕರ್ ಶೆಟ್ಟಿ
77 ಭಟ್ಕಳ್ – ಸುನಿಲ್ ಬಿ. ನಾಯಕ್
80 ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
81 ಯಲ್ಲಾಪುರ – ಅರಬೈಲ್ ಶಿವರಾಮ್ ಹೆಬ್ಬಾರ್
82 ಹಾನಗಲ್ – 83 ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ
84 ಹಾವೇರಿ – -ನೆಹರು ಓಲೆಕಾರ್
85 ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
86 ಹಿರೇಕೆರೂರು – ಬಿ.ಸಿ. ಪಾಟೀಲ್
87 ರಾಣೆಬೆನ್ನೂರು – ಅರುಣ್ ಕುಮಾರ್
88 ಹೂವಿನಹಡಗಲಿ – ಚಂದ್ರ ನಾಯ್ಕ
89 ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ
90 ವಿಜಯನಗರ(ಹೊಸಪೇಟೆ) – ಆನಂದ್ ಸಿಂಗ್
91 ಕಂಪ್ಲಿ – ಸುರೇಶ್ ಬಾಬು –
92 ಸಿರಗುಪ್ಪ – ಸೋಮಲಿಂಗಪ್ಪ
93 ಬಳ್ಳಾರಿ – ಗ್ರಾಮೀಣ ಬಿ.ಶ್ರೀರಾಮುಲು
94 ಬಳ್ಳಾರ ನಗರ – ಸೋಮಶೇಖರ್ ರೆಡ್ಡಿ
95 ಸಂಡೂರು –
96 ಕೂಡ್ಲಿಗಿ – ಎನ್.ವೈ. ಗೋಪಾಲಕೃಷ್ಣ
97 ಮೊಳಕಾಲೂರು – ತಿಪ್ಪೇಸ್ವಾಮಿ
98 ಚಳ್ಳಕೆರೆ- ಅನಿಲ್ ಕುಮಾರ್
99 ಚಿತ್ರದುರ್ಗ ನಗರ – ಬಿಜೆಪಿ – ತಿಪ್ಪಾರೆಡ್ಡಿ/ಅನೀಶ್ ಸಿದ್ದೇಶ್ವರ್
100 ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
101 ಹೊಸದುರ್ಗ – ಗೂಳಿಹಟ್ಟಿ ಶೇಖರ್
102 ಹೊಳಲ್ಕೆರೆ – ಎಂ. ಚಂದ್ರಪ್ಪ
103 ಜಗಳೂರು – ಎಸ್.ವಿ. ರಾಮಚಂದ್ರ
104 ಹರಪನಹಳ್ಳಿ – ಕರುಣಾಕರ ರೆಡ್ಡಿ
105 ಹರಿಹರ – ಬಿ.ಪಿ.ಹರೀಶ್
106 ದಾವಣಗೆರೆ ಉತ್ತರ – ಬಿಜೆಪಿ – ಬಸವರಾಜ ಬೊಮ್ಮ –
107 ದಾವಣಗೆರೆ ದಕ್ಷಿಣ – ಯಶವಂತರಾವ್ ಜಾಧವ್
108 ಮಾಯಕೊಂಡ – ಪ್ರೊ. ಲಿಂಗಣ್ಣ
109 ಚನ್ನಗಿರಿ – ಮಾಡಾಳ್ ಮಲ್ಲಿಕಾರ್ಜುನ
110 ಹೊನ್ನಾಳಿ – ರೇಣುಕಾಚಾರ್ಯ –
111 ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ
112 ಭದ್ರಾವತಿ – ಕಾಂತೇಶ್ /ಪವಿತ್ರಾ ರಾಮಯ್ಯ
113 ಶಿವಮೊಗ್ಗ – ಕೆ.ಎಸ್. ಈಶ್ವರಪ್ಪ
114 ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
115 ಶಿಕಾರಿಪುರ – ವಿಜಯೇಂದ್ರ
116 ಸೊರಬ – ಕುಮಾರ್ ಬಂಗಾರಪ್ಪ
117 ಸಾಗರ – ಹರತಾಳು ಹಾಲಪ್ಪ
118 ಬೈಂದೂರು – ಬಿ. ಸುಕುಮಾರ್ ಶೆಟ್ಟಿ
119 ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ
120 ಉಡುಪಿ – ರಘುಪತಿ ಭಟ್
121 ಕಾವು – ಲಾಲಾಜಿ ಮಂಡನ್
122 ಕಾರ್ಕಳ – ವಿ. ಸುನಿಲ್ ಕುಮಾರ್
123 ಶೃಂಗೇರಿ – ಜೀವರಾಜ್
124 ಮೂಡಿಗೆರೆ –
125 ಚಿಕ್ಕದುಗಳೂರು – ಸಿ.ಟಿ. ರವಿ
126 ತರೀಕೆರೆ – ಡಿ.ಎಸ್. ಸುರೇಶ್
127 ಕಡೂರು – ಬೆಳ್ಳಿಪ್ರಕಾಶ್
128 ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ
129 ತಿಪಟೂರು – ಬಿ.ಸಿ. ನಾಗೇಶ್
130 ತುರುವೇಕೆರೆ – ಎ.ಎಸ್. ಜಯರಾಂ
131 ಕುಣಿಗಲ್ – ಮುದ್ದಹನುಮೇಗೌಡ,
132 ತುಮಕೂರು – ಜ್ಯೋತಿ ಗಣೇಶ್ /ಕೃಷ್ಣಕುಮಾರ್
133 ತುಮಕೂರು ಗ್ರಾಮಾಂತರ – ಸುರೇಶ್ ಗೌಡ
134 ಕೊರಟಗೆರೆ – ಅನಿಲ್ ಕುಮಾರ್
136 ಸಿರಾ – ಡಾ. ರಾಜೇಶ್ ಗೌಡ
137 ಪಾವಗಡ –
138 ಮಧುಗಿರಿ –
130 ಗೌರಿಬಿದನೂರು –
140 ಭಾಗೇಪಲ್ಲಿ –
141 ಚಿಕ್ಕಬಳ್ಳಾಪುರ –ಡಾ. ಸುಧಾಕರ್
142 ಶಿಡ್ಲಘಟ್ಟ –
143 ಚಿಂತಾಮಣಿ – ಜಿ.ಕೆ. ಕೃಷ್ಣಾರೆಡ್ಡಿ
144 ಶ್ರೀನಿವಾಸಪುರ –
145 ಮುಳಬಾಗಿಲು –
146 ಕೆಜಿಎಫ್ – ಸಂಪಂಗಿ
147 ಬಂಗಾರಪೇಟೆ –
148 ಕೋಲಾರ – ವರ್ತೂರು ಪ್ರಕಾಶ್
149 ಮಾಲೂರು – ಮಂಜುನಾಥ ಗೌಡ
15 ಯಲಹಂಕ – ಎಸ್.ಆರ್. ವಿಶ್ವನಾಥ್
151 ಕೆ.ಆರ್.ಪುರಂ – ಭೈರತಿ ಬಸವರಾಜ್
152 ಬ್ಯಾಟರಾಯನಪುರ – ರವಿ/ ತದ್ಭುಶ್ ಗೌಡ /ಮುನೀಂದ್ರ ಕುಮಾರ್
153 ಯಶವಂತಪುರ – ಎಚ್.ಟಿ. ಸೋಮಶೇಖರ್
154 ರಾಜರಾಜೇಶ್ವರಿ ನಗರ-
155 ದಾಸರಹಳ್ಳಿ – ಮುನಿರಾಜು – ಮುನಿರತ್ನ
156 ಮಹಾಲಕ್ಷ್ಮೀ ಲೇಔಟ್ – ಕೆ. ಗೋಪಾಲಯ್ಯ
157 ಮಲ್ಲೇಶ್ವರಂ – ಡಾ. ಸಿ.ಎನ್.ಅಶ್ವಥ ನಾರಾಯಣ
158 ಹೆಬ್ಬಾಳ – ಕಟ್ಟಾಸುಬ್ರಹ್ಮಣ್ಯ ನಾಯ್ಡು
159 ಪುಲಕೇಶಿನಗರ -ಎಸ್.ರಘು
160 ಸರ್ವಜ್ಞನಗರ –
161 ಸಿವಿ ರಾಮನ್ ನಗರ
162 ಶಿವಾಜಿನಗರ –
163 ಶಾಂತಿನಗರ –
164 ಗಾಂಧಿನಗರ – ಸಪ್ತಗಿರಿಗೌಡ/ ಕೃಷ್ಣಯ್ಯ ಶೆಟ್ಟಿ
165 ರಾಜಾಜಿನಗರ – ಸುರೇಶ್ ಕುಮಾರ್
166 ಗೋವಿಂದರಾಜನಗರ – ವಿ. ಸೋಮಣ್ಣ
167 ವಿಜಯನಗರ – ರವೀಂದ್ರ/ ಉಮೇಶ್ ಶೆಟ್ಟಿ
168 ಚಾಮರಾಜಪೇಟೆ –
169 ಚಿಕ್ಕಪೇಟೆ – ಉದಯ್ ಗರುಡಾಚಾರ್
170 ಬಸವನಗುಡಿ – ರವಿಸುಬ್ರಮಣ್ಯ
171 ಪದ್ಮನಾಭನಗರ – ಆರ್. ಅಶೋಕ್
172 ಬಿಟಿಎಂ ಲೇಔಟ್-
173 ಜಯನಗರ – ತೇಜಸ್ವಿನಿ ಅನಂತ್ ಕುಮಾರ್/ಸಿ.ಕೆ.ರಾಮಮೂರ್ತಿ/ ಎನ್.ಆರ್. ರಮೇಶ್
174 ಮಹದೇವಪುರ – ಅರವಿಂದ ಲಿಂಬಾವಳಿ
175 ಬೊಮ್ಮನಹಳ್ಳಿ –ಸತೀಶ್ ರೆಡ್ಡಿ
176 ಬೆಂಗಳೂರು ದಕ್ಷಿಣ -ಎಂ. ಕೃಷ್ಣಪ್ಪ
177 ಆನೇಕಲ್ -ಕೆ.ಶಿವರಾಂ
78 ಹೊಸಕೋಟೆ – ಎಂಟಿಬಿ ಪುತ್ರ
179 ದೇವನಹಳ್ಳಿ –
180 ದೊಡ್ಡಬಳ್ಳಾಪುರ –
181 ನೆಲಮಂಗಲ – ನಾಗರಾಜ್
182 ಮಾಗಡಿ – ಪ್ರಸನ್ನಗೌಡ
183 ರಾಮನಗರ –
184 ಕನಕಪುರ –
185 ಚನ್ನಪಟ್ಟಣ -ಯೋಗೀಶ್ವರ್
186 ಮಳವಳ್ಳಿ –
187 ಮದ್ದೂರು –
188 ಮೇಲುಕೋಟೆ-
189 ಮಂಡ್ಯ –
190 ಶ್ರೀರಂಗಪಟ್ಟಣ – ಸಚ್ಚಿದಾನಂದ ಮೂರ್ತಿ
191 ನಾಗಮಂಗಲ –
192 ಕೆ.ಆರ್.ಪೇಟೆ – ನಾರಾಯಣಗೌಡ
193 ಶ್ರವಣಬೆಳಗೊಳ –
194 ಅರಸೀಕೆರೆ -ಎನ್.ಆರ್.ಸಂತೋಷ್
195 ಬೇಲೂರು – ಸುರೇಶ್
196 ಹಾಸನ – ಪ್ರೀತಂಗೌಡ
197 ಹೊಳೆನರಸೀಪರ –
198 ಅರಕಲಗೂಡು – ಯೋಗಾ ರಮೇಶ್
199 ಸಕಲೇಶಪುರ – ಜಿಮ್ ಸೋಮ್ –
200 ಬೆಳ್ತಂಗಡಿ – ಹರೀಶ್ ಪೂಂಜ
201 ಮೂಡಬಿದ್ರೆ -ಉಮಾನಾಥ ಕೋಟ್ಯಾನ್
22 ಮಂಗಳೂರು ನಗರ ಉತ್ತರ – ಡಾ. ಭರತ್ ಶೆಟ್ಟಿ
203 ಮಂಗಳೂರು ನಗರ – ವೇದವ್ಯಾಸ್ ಕಾಮತ್
204 ಮಂಗಳೂರು –
205 ಬಂಟ್ವಾಳ – ರಾಜೇಶ್ ನಾಯ್ಕ ಉಳಿಪ್ಪಾಡಿ
206 ಪುತ್ತೂರು –
207 ಸುಳ್ಯ –
208 ಮಡಿಕೇರಿ- ಅಪ್ಪಚ್ಚು ರಂಜನ್
209 ವಿರಾಜಪೇಟೆ – ಕೆ.ಜಿ. ಬೋಪಯ್ಯ
210 ಪಿರಿಯಾಪಟ್ಟಣ –
211 ಕೃಷ್ಣರಾಜನಗರ –
212 ಹುಣಸೂರು –
213 ಹೆಗ್ಗಡದೇವನಕೋಟೆ –
214 ನಂಜನಗೂಡು -ಹರ್ಷವರ್ಧನ್
215 ಚಾಮುಂಡೇಶ್ವರಿ –
216 ಕೃಷ್ಣರಾಜ –ಎಸ್.ಎ.ರಾಮದಾಸ್
217 ಚಾಮರಾಜ -ಎಲ್.ನಾಗೇಂದ್ರ
218 ನರಸಿಂಹರಾಜ –
219 ವರುಣಾ-ಸಿದ್ದಲಿಂಗಸ್ವಾಮಿ
220 ತಿ. ನರಸೀಪುರ –
221 ಹನೂರು – ಪ್ರೀತಂ ನಾಗಪ್ಪ
222 ಕೊಳ್ಳೇಗಾಲ – ಎನ್. ಮಹೇಶ್
223 ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್
224 ಚಾಮರಾಜನಗರ – ರುದ್ರೇಶ್