ಹೊಲ ಮೇಯಲು ಹೊರಟ ಬೇಲಿ…….. ಅಯ್ಯೋ ದೇವಾ……

ಮಂಗಳೂರು: ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎನ್ ರಾಜಣ್ಣ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು ತನಿಖೆ ನಡೆಸಿದ ಈಶಾನ್ಯ ವಿಭಾಗದ ಎಸಿಪಿ ಬಿ ಎಂ ಲಕ್ಷ್ಮಿ ಪ್ರಸಾದ್ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಬಾಬು ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತ ಯುವತಿಯೋರ್ವಳಿಂದ ಸಾಲ ಪಡೆದಿದ್ದ. ಆ ಯುವತಿ ದೂರು ದಾಖಲಿಸಲು ಕೋಡಿಗೆಹಳ್ಳಿ ಠಾಣೆಗೆ ಬಂದಿದ್ದ ವೇಳೆ ಯುವತಿಯ ಮೊಬೈಲ್ ನಂಬರ್ ಪಡೆದಿದ್ದ ರಾಜಣ್ಣ ಸಂದೇಶ ಕಳುಹಿಸಲು ಆರಂಭಿಸಿದ್ದ. ಮಾತ್ರವಲ್ಲ ಆಕೆ ಠಾಣೆಗೆ ಹೋಗಿದ್ದ ವೇಳೆ ಡ್ರೈ ಫ್ರೂಟ್ಸ್ ಬಾಕ್ಸ್ ನೀಡಿದ್ದ. ಮುಂದುವರಿದು ಕೊನೆಯ ಕೀ ನೀಡಿ ಒಳಗೆ ಹೋಗುವಂತೆಯೂ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪರೋಕ್ಷವಾಗಿ ಬೇಡಿಕೆ ಇಟ್ಟಿದ್ದ. ಅಲ್ಲಿಂದ ತಪ್ಪಿಸಿಕೊಂಡ ಯುವತಿ ಠಾಣೆಯಲ್ಲಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್ ಗೆ ವಿಷಯ ತಿಳಿಸಿದ್ದಳು. ಆದರೆ ಪಿಐ ರಾಜಣ್ಣ ಯಾರಿಗೂ ವಿಷಯ ತಿಳಿಸಬೇಡ, ನನ್ನ ಮರ್ಯಾದೆ ಹೋಗುತ್ತದೆ ಎಂದು ತಾಕೀತು ಮಾಡಿದ್ದ. ಆದರೆ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಯುವತಿ ಡಿಸಿಪಿ ಗೆ ದೂರು ನೀಡಿದ್ದಳು. ದೂರು ಸ್ವೀಕರಿಸಿದ ಡಿಸಿಪಿ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಗೆ ಸೂಚಿಸಿದ್ದರು. ತನಿಖೆ ನಡೆದು ವರದಿ ಸಲ್ಲಿಕೆಯಾಗಿದ್ದು ಪಿಐ ರಾಜಣ್ಣ ಯುವತಿಗೆ ಲೈಂಗಿಕ ಕಿರುಕುಳ, ಲೈಂಗಿಕ ಕ್ರಿಯೆಗೆ ಪರೋಕ್ಷ ಒತ್ತಾಯ ಮಾಡಿದ್ದು ನಿಜವೆಂದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here