ಹೋರಾಟಗಾರನಿಗೆ ಸೆರೆಮನೆಯೇ ಅರಮನೆ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ನಟ ಚೇತನ್ ಅಹಿಂಸಾಗೆ ಬೆಂಗಳೂರಿನ 32 ನೇ ಎ ಸಿ ಎಂ ಎಂ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಪರಪ್ಪನ ಅಗ್ರಹಾರ ಜೈಲಿಂದ ಬಿಡುಗಡೆಗೊಂಡಿದ್ದಾರೆ.

ಬಿಡುಗಡೆ ಬಳಿಕ ಮಾತನಾಡಿದ ಚೇತನ್, ಕಳೆದ ಬಾರಿ ಟ್ವೀಟ್ ಮಾಡಿದ್ದಕ್ಕೆ 7 ದಿನ ಜೈಲಿಗೆ ಹಾಕಿದ್ದರು. ಈ ಬಾರಿ 3 ದಿನ ಹಾಕಿದ್ದಾರೆ. ಹಿಂದುತ್ವ ಅನ್ನೋದು ಯಾವುದು ಇಲ್ಲ. ಲಿಂಗಾಯಿತ ಪ್ರತ್ಯೇಕ ಧರ್ಮ ಕೇಳಿದಂತೆ ಹಿಂದುತ್ವವನ್ನು ಕೇಳಿ. ನಾನು ನಿಮ್ಮ ಜತೆಗಿದ್ದೇನೆ. ಹಿಂದುತ್ವವನ್ನು ಬೇರೆ ರೀತಿ ಬಿಂಬಿಸಲಾಗುತ್ತಿದೆ. ಇನ್ನಷ್ಟು ಬಾರಿ ಬಂಧಿಸಿದರೂ ನಾನು ಹೆದರುವುದಿಲ್ಲ. ಹೋರಾಟಗಾರನಿಗೆ ಸೆರೆಮನೆಯೇ ಅರಮನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here