ಹಿರಿಯ ನಾಗರಿಕನಿಂದ ವಿಶೇಷ ಚೇತನ ಮಹಿಳೆಯ ಅತ್ಯಾಚಾರ

ಮಂಗಳೂರು: ವಿಶೇಷ ಚೇತನೆ ಮಹಿಳೆಯನ್ನು ಹಿರಿಯ ನಾಗರಿಕನೊಬ್ಬ ಅತ್ಯಾಚಾರಗೈದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಸೂರಿಂಜೆ ನಿವಾಸಿ ರಾಜಾ ಭಟ್(65) ವಿಶೇಷ ಚೇತನೆ ಮಹಿಳೆಯನ್ನು ಅತ್ಯಾಚಾರಗೈದ ಆರೋಪಿ. ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಬಂದ  ರಾಜಾಭಟ್ ಮಹಿಳೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಾನೆ.ಈ ಬಗ್ಗೆ ನೆರೆಮನೆಯವರಿಂದ ವಿಷಯ ತಿಳಿದ ಮನೆಯವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಈ ಪ್ರಕರಣವನ್ನು ಪಾಂಡೇಶ್ವರ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.

ಆರೋಪಿ ರಾಜಾ ಭಟ್ ಮನೆ ಮಂದಿಯನ್ನು ತೊರೆದು ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದು,  ಸಹೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ಹೋದ ಬಳಿಕ ಈ ವಿಶೇಷ ಚೇತನೆ ಮಹಿಳೆ ಮಾತ್ರ ಮನೆಯಲ್ಲಿ ಇರುವ ಬಗ್ಗೆ ಮಾಹಿತಿಯಿತ್ತು. ಸಮಯ ಸಾಧಿಸಿ ವಿಕಲಚೇತನ ಮಹಿಳೆಯ ಮನೆಗೆ ಬಂದ ರಾಜಾ ಭಟ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜಾ ಭಟ್ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here