ರಸ್ತೆ ಮದ್ಯೆ ಕಾರು – ನಿಂತು ಹೋದ ರೋಗಿಯ ಉಸಿರು

ಮಂಗಳೂರು: ರಾಜಕೀಯ ಪಕ್ಷದ ನಾಯಕನೊಬ್ಬ ತನ್ನ ಕಾರನ್ನು ರಸ್ತೆ ಮದ್ಯೆ ಪಾರ್ಕ್ ಮಾಡಿದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದ ರೋಗಿಯೊಬ್ಬ ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.

ಸುರೇಶ್ ಚಂದ್ರ ಎಂಬವರಿಗೆ ಹೃದಯಾಘಾತವಾಗಿದ್ದು ವೈದ್ಯರ ಶಿಫಾರಸಿನಂತೆ ಲಕ್ನೋ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ರಸ್ತೆ ಮದ್ಯೆ ಉಮೇಶ್‌ ಮಿಶ್ರಾ ತಮ್ಮ ಕಾರನ್ನು ಪಾರ್ಕ್‌ ಮಾಡಿದ್ದ ಕಾರಣ ಸುಮಾರು 30 ನಿಮಿಷಗಳ ಕಾಲ ಆಂಬ್ಯುಲೆನ್ಸ್‌ ಮುಂದೆ ಸಾಗುವುದು ಸಾಧ್ಯವಾಗಿರಲಿಲ್ಲ. ರೋಗಿಯ ಕುಟುಂಬದವರು ಮಿಶ್ರಾ ನನ್ನು ತರಾಟೆಗೆ ತೆಗೆದು ಕೊಳ್ಳುತ್ತಿರುವ ವೇಳೆ ಆಂಬ್ಯುಲೆನ್ಸ್‌ ನಲ್ಲಿದ್ದ ರೋಗಿ ಸುರೇಶ್ ಚಂದ್ರ ನೋವಿನಿಂದ ನರಳಿ ಮೃತ ಪಟ್ಟಿದ್ದಾರೆ. 

ಉಮೇಶ್ ಮಿಶ್ರಾ ಎಂದು ಗುರುತಿಸಲಾದ ಈ ಬಿಜೆಪಿ ನಾಯಕನ ಬೇಜವಾಬ್ದಾರಿತನವನ್ನು ಮೃತ ವ್ಯಕ್ತಿಯ ಕುಟುಂಬ ಪ್ರಶ್ನಿಸಿದಾಗ ಆತ ಅವರಿಗೆ ಬೆದರಿಕೆ ಹಾಕಿರುವುದಾಗಿ ಕುಟುಂಬ ಆರೋಪಿಸಿದೆ. ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಹಾಕುವುದಾಗಿ ಹೇಳಿದ ಆತ ಮ್ಯಾಜಿಸ್ಟ್ರೇಟ್ ಮತ್ತು ಎಸ್ ಪಿ ನನ್ನ ಆಣತಿಯಂತೆ ಕೆಲಸ ಮಾಡುತ್ತಿದ್ದು, ನಿನ್ನನ್ನು ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕುವುದನ್ನು ಸ್ಥಳೀಯರು ಮೊಬೈಲ್‌ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬಾಯಿ ಮುಚ್ಚಿಕೊಂಡಿದ್ದರೆಂದು ಕುಟುಂಬ ದೂರಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರ ನಿರ್ಲಕ್ಷಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋಗಾಗಿಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here