ಬಡವನ ಕೋಪ ದವಡೆಗೆ ಮೂಲ-ಕಾಲ್ನಡಿಗೆಯಲ್ಲಿ ಸಾವಿರ ಕಿ.ಮೀ ಪಯಣ

ಮಂಗಳೂರು: ಬೆಂಗಳೂರಿನಲ್ಲಿ ತಮ್ಮ ಉದ್ಯೋಗದಾತನಿಂದ ಚಿತ್ರಹಿಂಸೆ ತಾಳಲಾರದೆ ಒಡಿಶಾದ ಕಾಳಹಂಡಿ ಜಿಲ್ಲೆಯ ಮೂವರು ವಲಸೆ ಕಾರ್ಮಿಕರು ಕೈಯಲ್ಲಿ ಕಾಸಿಲ್ಲದೆ ಹೊಟ್ಟೆಗೆ ಕೂಳಿಲ್ಲದೆ ಸಾವಿರ ಕಿಲೋಮೀಟರ್ ದೂರ ನಡೆದು ಏ.2ರಂದು ಒಡಿಸ್ಸಾದ  ಕೊರಾಪುಟ್ ತಲುಪಿದ್ದಾರೆ.

ಎರಡು ತಿಂಗಳ ಹಿಂದೆ ಮದ್ಯವರ್ತಿಯೊಬ್ಬರ ಸಹಾಯದಿಂದ ಒಡಿಶಾದ 12 ಮಂದಿ ವಲಸೆ ಕಾರ್ಮಿಕರು ಬೆಂಗಳೂರಿಗೆ ಬಂದಿದ್ದರು. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಕಂಪನಿ ವೇತನ ನೀಡಲು ನಿರಾಕರಿಸಿದೆ. ಮಾತ್ರವಲ್ಲ ಬಾಕಿ ಹಣ ಕೇಳಿದಾಗ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಕುಟುಂಬ ಪೋಷಿಸಲು ಹಣ ಸಂಪಾದಿಸುವ ಭರವಸೆಯೊಂದಿಗೆ ನಾವು ಬೆಂಗಳೂರಿಗೆ ಬಂದಿದ್ದೆವು. ಈಗ ನಾವು ಕಾಲ್ನಡಿಗೆಯಲ್ಲಿ ನಮ್ಮ ಮನೆಗೆ ಮರಳುತ್ತಿದ್ದೇವೆ ಎಂದು ಈ ಮೂವರು ಕಾರ್ಮಿಕರು ಹೇಳಿದ್ದಾರೆ. ಹೀಗೆ ಕಾಲ್ನಡಿಗೆಯಲ್ಲಿ ತಮ್ಮ ಗ್ರಾಮದ ಕಡೆ ಹೆಜ್ಜೆ ಹಾಕುತ್ತಿರುವ ಕಾಳಹಂಡಿಯ ಜಯಪಟ್ಟಣದ ತಿಂಗಳಕನ್ ಗ್ರಾಮದ ಕಟಾರ್ ಮಾಝಿ, ಬುಡು ಮಾಝಿ, ಭಿಕಾರಿ ಮಾಝಿ ಅವರನ್ನು ಕೊರಾಪುಟ್ ನ ಪೊಟ್ಟಂಗಿ ಬ್ಲಾಕ್ ನ ಪಡಲಗುಡದ ಸ್ಥಳೀಯರು ಅವರ ಕಥೆ ಕೇಳಿ ನೆರವಿನ ಹಸ್ತ ಚಾಚಿದ್ದಾರೆ. ಈ ಮೂವರು ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕೈಯಲ್ಲಿ ನೀರಿನ ಬಾಟಲ್ ಹಿಡಿದು ನಡೆಯುತ್ತಿರುವ ದೃಶ್ಯ ಪಿಟಿಐ ಸೆರೆ ಹಿಡಿದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here