ಮಂಗಳೂರು: ಚೀನಾದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ತಜ್ಞರು ಸರಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದಾರೆ. ಚೀನಾದಲ್ಲಿ ಜನಸಂಖ್ಯೆಯು ಕಡಿಮೆಯಾಗುತ್ತಿದ್ದು, ಇಲ್ಲಿನ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತಿದೆ.
ಈ ಹಿನ್ನಲೆಯಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾ ಸರಕಾರ ನಾನಾ ರೀತಿಯ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಚೀನಾದ ಕೆಲವು ಕಾಲೀಜುಗಳು ರಾಷ್ಟ್ರೀಯ ಕಾಳಜಿಯನ್ನು ಬೆಂಬಲಿಸಲು ವಿಶಿಷ್ಟವಾದ ಯೋಜನೆಯನ್ನು ಜಾರಿಗೊಳಿಸಿದೆ. ಚೀನಾದ 9 ಕಾಲೇಜಿಗಳಲ್ಲಿ ಏಪ್ರಿಲ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲು ಒಂದು ವಾರಗಳ ಕಾಲ ರಜೆ ನೀಡುವ ಯೋಜನೆಯನ್ನು ಜಾರಿ ತಂದಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಮಾಡಲೆಂದೇ ಹೆಸರಿನಲ್ಲಿ ಒಂದು ವಾರಗಳ ಕಾಲ ರಜೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನಡೆಸುತ್ತಿರುವ 9 ಕಾಲೇಜುಗಳಲ್ಲಿ ಒಂದಾದ ಮಿಯಾನ್ಯಾಂಗ್ ಫ್ಲೈಯಿಂಗ್ ಒಕೇಶನಲ್ ಕಾಲೇಜ್ ಮಾರ್ಚ್ 21ರಿಂದ ಒಂದು ವಾರದ ರಜೆಯನ್ನು ಘೋಷಿಸಿದೆ.