ಮಂಗಳೂರು: ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಯು ಕಾಂಗ್ರೆಸ್ ಫೈಲ್ಸ್ ವಿಡಿಯೋ ಸರಣಿಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಇನ್ನೊಂದು ಸುತ್ತಿನ ದಾಳಿಗೆ ಚಾಲನೆ ನೀಡಿದೆ.
ಕಾಂಗ್ರೆಸಿನ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ವಿಡಿಯೋ ಸರಣಿಯ ಉದ್ದೇಶವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಕಾಂಗ್ರೆಸ್ ಫೈಲ್ಸ್ ಮೊದಲ ಸಂಚಿಕೆ ಬಿಡುಗಡೆಗೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿ ಹೇಗೆ ಒಂದರ ನಂತರ ಒಂದರಂತೆ ಭ್ರಷ್ಟಾಚಾರ ಮತ್ತು ಹಗರಣಗಳು ನಡೆದಿದ್ದವು ಎನ್ನುವುದನ್ನು ನೋಡಿ ಎಂದು ಬಿಜೆಪಿ ಅಧಿಕೃತವಾಗಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಎಂಬ ಶೀರ್ಷಿಕೆಯ ವಿಡಿಯೋ ಸಂಚಿಕೆಯಲ್ಲಿ, ಕಾಂಗ್ರೆಸ್ ತನ್ನ 70 ವರ್ಷಗಳ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಂದ 482069,00,00,000 ರೂಪಾಯಿಗಳನ್ನು ಲೂಟಿ ಮಾಡಿದೆ. ಈ ಹಣವನ್ನು ಭದ್ರತೆ ಮತ್ತು ಅಭಿವೃದ್ಧಿಯ ಹಲವಾರು ಉಪಯುಕ್ತ ಕ್ಷೇತ್ರಗಳಿಗೆ ಬಳಸಬಹುದಾಗಿತ್ತು ಎಂದು ಬಿಜೆಪಿ ಹೇಳಿದೆ. ವಿಡಿಯೋದ ಅಂತ್ಯದಲ್ಲಿ ಇದು ಕಾಂಗ್ರೆಸ್ಸಿನ ಭ್ರಷ್ಟಾಚಾರದ ಟ್ರೈಲರ್ ಮಾತ್ರ ಪಿಚ್ಚರ್ ಇನ್ನು ಬಾಕಿ ಇದೆ ಎಂದು ತೋರಿಸಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Congress Files के पहले एपिसोड में देखिए, कैसे कांग्रेस राज में एक के बाद एक भ्रष्टाचार और घोटाले हुए… pic.twitter.com/vAZ7BDZtFi
— BJP (@BJP4India) April 2, 2023