ಮಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎ.8ರಂದು ಅಸ್ಸಾಂನ ತೇಝ್ ಪುರ್ ಏರ್ ಬೇಝ್ ನಿಂದ ಸುಖೋಯ್ 30 MKI ಫೈಟರ್ ಏರ್‌ಕ್ರಾಫ್ಟ್‌ನಲ್ಲಿ ಮೊದಲ ಬಾರಿಗೆ ಪ್ರಯಾಣ ಬೆಳೆಸಿದರು.ರಾಜ್ಯಕ್ಕೆ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಫೈಟರ್ ಜೆಟ್ ನಲ್ಲಿ ಪ್ರಯಾಣಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಎಪ್ರಿಲ್ 6 ರಂದು ಅಸ್ಸಾಂಗೆ ಆಗಮಿಸಿದ್ದು, ಎಪ್ರಿಲ್ 7 ರಂದು ಕಾಝಿರಂಗ ರಾಷ್ಟ್ರೀಯ ಉದ್ಯಾನವನವನ್ನು ಉದ್ಘಾಟಿಸಿದ್ದರು. ಉದ್ಯಾನದಲ್ಲಿ ಎರಡು ದಿನಗಳ ‘ಗಜ್ ಉತ್ಸವ’ವನ್ನು ಉದ್ಘಾಟಿಸಿದ ನಂತರ ಗುವಾಹಟಿ ಹೈಕೋರ್ಟ್ 75 ವರ್ಷಗಳನ್ನು ಪೂರ್ಣಗೊಳಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. 2009 ರಲ್ಲಿ ಪುಣೆ ಏರ್ ಬೇಸ್‌ನಿಂದ ಮುಂಚೂಣಿ ಯುದ್ಧ ವಿಮಾನ ಸುಖೋಯ್ ಫೈಟರ್ ಜೆಟ್‌ನಲ್ಲಿ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಹಾರಾಟ ನಡೆಸಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#WATCH | President Droupadi Murmu to take sortie on the Sukhoi 30 MKI fighter aircraft at Tezpur Air Force Station, Assam pic.twitter.com/DXjG3kieut
— ANI (@ANI) April 8, 2023
#WATCH | Assam: President Droupadi Murmu takes sortie on the Sukhoi 30 MKI fighter aircraft pic.twitter.com/jtRVsFR2X2
— ANI (@ANI) April 8, 2023