ಮಂಗಳೂರು : ದಲೈಲಾಮಾ ಅವರು ಬಾಲಕನ ತುಟಿಗೆ ಚುಂಬಿಸುತ್ತಿರುವುದು ಮತ್ತು ಆತನಲ್ಲಿ ತನ್ನ ನಾಲಗೆಯನ್ನು ಚೀಪುವಂತೆ ಕೇಳುವ ವಿಡಿಯೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬಾಲಕನಲ್ಲಿ ತನ್ನ ನಾಲಗೆಯನ್ನು ಚೀಪುವಂತೆ ಕೇಳಿದ ದಲೈಲಾಮಾ ತನ್ನ ನಾಲಿಗೆಯನ್ನು ಹೊರಚಾಚಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋದ ಬಗ್ಗೆ ಟ್ವಿಟರ್ ಬಳಕೆದಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲೈಲಾಮ ಹೀಗ್ಯಾಕೆ ಮಾಡಿದರೆಂದು ಕೆಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. 2019ರಲ್ಲಿ ದಲೈಲಾಮ ತನ್ನ ಉತ್ತರಾಧಿಕಾರಿ ಮಹಿಳೆಯಾಗಿರಬೇಕು ಮತ್ತವರು ಸುಂದರವಾಗಿರಬೇಕು ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದರು.
Update : ಬೌದ್ಧ ಧರ್ಮಗುರು ದಲೈಲಾಮ ಪುಟ್ಟ ಬಾಲಕನಿಗೆ ಚುಂಬಿಸಿ ಅಸಭ್ಯವಾಗಿ ವರ್ತಿಸಿದ್ದರೆನ್ನಲ್ಲಾದ ವಿಡಿಯೋ ವೈರಲ್ ಆದ ಬಳಿಕ ಸೋಮವಾರ, ಬಾಲಕನಿಗೆ ಹಾಗೂ ಕುಟುಂಬಕ್ಕೆ ನೋವಾಗಿದ್ದರೆ ತಾನು ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆಂದು ಎನ್ ಡಿ ಟಿವಿ ವರದಿ ಮಾಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
This is Dalai Lama. What's your thought about his action? pic.twitter.com/1GLZOo1lQl
— Paulo Petruff (@ppetruff) April 9, 2023