ನದಿ ನೀರಿನ ಮೇಲೆ ಮಹಿಳೆಯ ನಡಿಗೆ – ಪವಾಡ ಬಯಲು

ಮಂಗಳೂರು: ಜಬಲ್‌ ಪುರದ ತಿಲ್ವಾರಘಾಟ್‌ ಪ್ರದೇಶದಲ್ಲಿ ಮಹಿಳೆಯೊಬ್ಬರು ನರ್ಮದಾ ನದಿ ನೀರಿನಲ್ಲಿ ನಡೆದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಜನರು ಆಕೆಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಆಗಮಿಸತೊಡಗಿದರು. ಪೊಲೀಸರ ಮಧ್ಯ ಪ್ರವೇಶದಿಂದ ಮಹಿಳೆಯ ನೀರಿನ ಮೇಲಿನ ನಡಿಗೆ ಬಯಲಾಗಿದೆ. 

ನೀರಿನ ಮೇಲೆ ನಡೆದಿದ್ದಾರೆ ಎಂದು ಹೇಳಲಾದ ಮಹಿಳೆಯ ಹೆಸರು ಜ್ಯೋತಿ ರಘುವಂಶಿ. ನರ್ಮದಾಪುರಂ ನಿವಾಸಿಯಾಗಿರುವ ಈಕೆ 10 ತಿಂಗಳ ಹಿಂದೆ ಮನೆ ಬಿಟ್ಟು, ನರ್ಮದಾ ನದಿ ತೀರದಲ್ಲಿ ನೆಲೆಸಿದ್ದಾಳೆ. ನಾನು ದೇವತೆಯಲ್ಲ, ಎಂದು  ಹೇಳುವ ಈಕೆ ಯಾರನ್ನೂ ನಂಬಿಸಲು ಹೋಗಿಲ್ಲ,ತನಗೆ ದೈವಿಕ ಶಕ್ತಿ ಇದೆ ಎಂದು ಹೇಳಿಕೊಂಡಿಲ್ಲ. ನದಿ ತೀರದಲ್ಲಿ ವಾಸವಾಗಿರುವ ಕಾರಣ ನದಿಯ ಆಳ-ಅಗಲ ಹರಿವಿನ ಬಗ್ಗೆ ಸಂಪೂರ್ಣ ಮಾಹಿತಿ ಆಕೆಗಿದೆ. ನದಿ ನೀರು ಎಲ್ಲಿ ನೆಲ ಮಟ್ಟದಲ್ಲಿ ಹರಿಯುತ್ತಿದೆ ಅನ್ನೋದು ಮಹಿಳೆಗೆ ಚೆನ್ನಾಗಿ ತಿಳಿದಿತ್ತು. ಈ ರೀತಿ ನೆಲ ಮಟ್ಟದಲ್ಲಿ ನೀರು ಹರಿಯುವ ಪ್ರದೇಶದಲ್ಲಿ ಈ ಮಹಿಳೆ ನಡೆದಾಡುತ್ತಾಳೆ. ದೂರದಿಂದ ನೋಡಿದರೆ ನದಿ ಮದ್ಯದಲ್ಲೇ ನಡೆದಾಡಿದಂತೆ ಕಂಡು ಬರುತ್ತದೆ. ಈ ರೀತಿಯಾಗಿ ನದಿ ನೀರಿನಲ್ಲಿ ಮಹಿಳೆ ನಡೆಯುವುದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯಬಿಟ್ಟಿದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವೀಡಿಯೋ ನೋಡಿ ಜನ ನದಿ ತೀರದಲ್ಲಿ ಜಮಾಯಿಸಿ ಮಹಿಳೆಯನ್ನು ʼನರ್ಮದಾ ಮಾತೆʼ ಎಂದು ಬಿಂಬಿಸಿ ಧರೆಗಿಳಿದ ದೇವತೆ ಎಂಬಂತೆ ಪೂಜಿಸ ತೊಡಗಿದರು. ಆಕೆ ನಡೆವ ಹಾದಿಯಲ್ಲಿ ಹೂವು ಚೆಲ್ಲಿ ಪೂಜೆ ಮಾಡಿದರು. ದಿನದಿಂದ ದಿನಕ್ಕೆ ಜನರ ಸಂಖ್ಯೆ ಹೆಚ್ಚಾಗ ತೊಡಗಿದಾಗ ಪೊಲೀಸರು ಭದ್ರತೆ ನೀಡುವುದರೊಂದಿಗೆ ತನಿಖೆಯನ್ನೂ ಶುರು ಮಾಡಿದರು. ಆಗ ನಿಜ ಸಂಗತಿ ಬಯಲಾಗಿದೆ. ಇದೀಗ ಪೊಲೀಸರು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹೇಳಿದ್ದು, ಕಳೆದ 10 ತಿಂಗಳಿನಿಂದ  ಮನೆ ಬಿಟ್ಟಿದ್ದ ಮಹಿಳೆಯನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here