ಮಂಗಳೂರು: ರಾಮನವಮಿ ಆಚರಣೆ ವೇಳೆ ಬಿಹಾರದ ಎರಡು ಜಿಲ್ಲೆಗಳಲ್ಲಿ ಕೋಮುಗಲಭೆ ಸಂಭವಿಸಿದ್ದು ಅಪಾರ ಹಾನಿ ನಷ್ಟ ಸಂಭವಿಸಿದೆ.
ಈ ನೋವಿನ ನಡುವೆ ಶೇಕಡ 70ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಕಿಶನ್ ಗಂಜ್ ಜಿಲ್ಲಾ ಕೇಂದ್ರದ ರುಯಿದಾಸ್ ಪ್ರದೇಶದ ಮುಸ್ಲಿಂ ಕುಟುಂಬವೊಂದು ರಮದಾನ್ ಮಾಸದಲ್ಲಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ಕುಟುಂಬ ತನ್ನೆಲ್ಲಾ ಭೂಮಿಯನ್ನು ಹನುಮಾನ್ ದೇವಾಲಯ ನಿರ್ಮಾಣಕ್ಕೆ ದಾನ ಮಾಡುವ ಮೂಲಕ ಜಾತಿ ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವವರಿಗೆ ಟಕ್ಕರ್ ಎನ್ನುವಂತೆ ಸಾಮರಸ್ಯದ ಸಂದೇಶ ನೀಡಿ ಸುದ್ದಿಯಲ್ಲಿದೆ. ಭೂಮಿ ದಾನ ಮಾಡಿದ ಫೈಸ್ ಮತ್ತು ಫಜಲ್ ಅಹಮದ್ ಅವರ ನೇತೃತ್ವದಲ್ಲಿಯೇ ಭೂಮಿ ಪೂಜೆ ಮತ್ತು ಅಡಿಪಾಯದ ಪೂಜಾ ಕಾರ್ಯ ನಡೆದಿದೆ. ವೃತ್ತಿಯಲ್ಲಿ ಇಂಜಿನಿಯರ್ ಗಳಾಗಿರುವ ಈ ಸಹೋದರರು 1.25 ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ನಮ್ಮ ತಂದೆ ಹಿಂದೆ ದೇವಸ್ಥಾನ ನಿರ್ಮಾಣಕ್ಕೆ ಜಾಗ ಕೊಡುವುದಾಗಿ ಮಾತು ಕೊಟ್ಟಿದ್ದರು, ಅದನ್ನು ಈಡೇರಿಸಿದ್ದೇವೆ ಎಂದು ಸಹೋದರರು ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ