ಮಂಗಳೂರು :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಶನಿವಾರ ಮತ್ತೊಂದು ವಾಣಿಜ್ಯ ಉಪಗ್ರಹ ಉಡಾವಣೆಗೆ ಸಿದ್ಧವಾಗಿದೆ. ಇಸ್ರೋ ತನ್ನ ಹೊಸ ಪಿಎಸ್ಎಲ್ ವಿ ರಾಕೆಟ್ ನೊಂದಿಗೆ ಎ.22 ರಂದು ಸಿಂಗಾಪುರದ ಭೂ ವೀಕ್ಷಣಾ TeLOS- 02 ಉಪಗ್ರಹವನ್ನು ಉಡಾವಣೆ ಮಾಡಲಿದೆ.
ಪಿಎಸ್ಎಲ್ ವಿ ಮೂಲಕ ಇದುವರೆಗೆ 33 ದೇಶಗಳ ಒಟ್ಟು 297 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಹೊಸ ರಾಕೆಟ್ 44 ಮೀಟರ್ ಎತ್ತರ ಎರಡು ಬಿಂದು ಎಂಟು ಮೀಟರ್ ವ್ಯಾಸ ಹೊಂದಿದ್ದು, ಇದು ನಾಲ್ಕು ಹಂತಗಳನ್ನು ಹೊಂದಿದೆ. ರಾಕೆಟ್ 320 ಟನ್ ತೂಕವನ್ನು ಹೊಂದಿದೆ ಎಂದು ಇಸ್ರೋ ತಿಳಿಸಿದೆ. ಎ.22ರಂದು ಮಧ್ಯಾಹ್ನ 2.19ಕ್ಕೆ ದೇಶದ ಏಕೈಕ ಬಾಹ್ಯಾಕಾಶ ಉಡಾವಣಾ ಕೇಂದ್ರ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.