ಮಂಗಳೂರು: ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ಮೋಸ ಹೋಗಿ ಮೋಹನ ಎಂಬ ಕಿರಾತಕನಿಗೆ ಬಲಿಯಾದ 27 ಹೆಣ್ಣು ಮಕ್ಕಳ ದಾರುಣ ಬದುಕಿನ ಕಥೆ “ದಹಾಡ್”
ಅಮೆಜಾನ್ ಪ್ರೈಮ್‌ನಲ್ಲಿ ಸುದ್ದಿ ಮಾಡುತ್ತಿದೆ. ಸುಮಾರು 8 ಎಪಿಸೋಡ್ ಗಳಲ್ಲಿ ಮೂಡಿ ಬಂದಿರುವ ಈ ಸರಣಿ 2003 ರಿಂದ 2009 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ನಡುಗಿಸಿದ ಸಯನೈಡ್ ಮೋಹನ ಎಂಬಾತ 20ರಿಂದ 30 ವರ್ಷದ ಬಡ ತರುಣಿಯರನ್ನು ಪ್ರೇಮದ ಬಲೆಯಲ್ಲಿ ಕೆಡವಿ ಮದುವೆಯಾಗುವ ಅಮಿಷವೊಡ್ಡಿ ದೂರದೂರಿಗೆ ಕರೆದೊಯ್ದು ಅವರ ಹಣ ಚಿನ್ನದ ದೋಚಿ ಸಯನೈಡ್ ನೀಡುವ ಮೂಲಕ ಸಾಲು ಸಾಲಾಗಿ ಕೊಂದು ಹಾಕಿದ ಕ್ರೌರ್ಯ ಆಧಾರಿತ ಕಥೆಯನ್ನು ಹೊಂದಿದೆ. ಹೆಣ್ಣಿನ ಬದುಕು ಮದುವೆಯಿಂದ ಪರಿಪೂರ್ಣವಾಗುವುದಿಲ್ಲ.
ಅದರಾಚೆಗೂ ಆಕೆಗೊಂದು ಬದುಕಿದೆ ಎನ್ನುವುದನ್ನು ಸರಣಿ ಚಿತ್ರ ಪ್ರತಿಪಾದಿಸುತ್ತಿದ್ದು, ಚಿತ್ರ ರಸಿಕರ ಗಮನ ಸೆಳೆದಿದೆ. ಲವ್ ಜಿಹಾದ್ ಆರೋಪದಿಂದ ತೆರೆದುಕೊಳ್ಳುವ ಕಥೆ ಅದೇ ಹಿಂದೂ ಮುಸ್ಲಿಂ ಜೋಡಿಯ ವಿವಾಹದೊಂದಿಗೆ ಕೊನೆಗೊಳ್ಳುವುದು ಹೈಲೈಟ್. ಒಟ್ಟಿನಲ್ಲಿ ದ.ಕ ಜಿಲ್ಲೆಯನ್ನು ನಡುಗಿಸಿದ, ಉಹಾಪೋಹಗಳಿಗೆ ಕಾರಣವಾದ ಸಯನೈಡ್ ಮೋಹನನ “ಸ್ಟೋರಿ” ರಾಜಸ್ಥಾನವೆಂಬ ಜಾತಿಯ ಕ್ರೌರ್ಯದಿಂದ ನರಳುತ್ತಿರುವ ನೆಲದಲ್ಲಿ ಮರುರೂಪ ಪಡೆದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಸರಣಿಯ ಸ್ತ್ರೀ ಪಾತ್ರಗಳು ಅತ್ಯದ್ಬುತವಾಗಿದ್ದು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.