ಜೀವಂತ ನವಿಲಿನ ಗರಿ ಕಿತ್ತು ಕ್ರೌರ್ಯ ಮೆರೆದ ಯುವಕ

ಮಂಗಳೂರು (ಮಧ್ಯಪ್ರದೇಶ): ಜೀವಂತ ನವಿಲಿನ ಗರಿಯನ್ನು ಕಿತ್ತು ತೆಗೆದು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಕಟ್ನಿ ಗ್ರಾಮದ ಅತುಲ್ ಎಂಬಾತ ಈ ದುಷ್ಕೃತ್ಯವನ್ನು ಎಸೆಗಿದ್ದು, ನವಿಲನ್ನು ಹಿಡಿದು ಜೀವಂತವಾಗಿ ಅದರ ಗರಿಗಳನ್ನು ಕಿತ್ತು ತೆಗೆದು ವಿಕೃತ ಆನಂದ ಪಡುತ್ತಿರುವುದು ವಿಡಿಯೋದಲ್ಲಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here