ನೋವು ಮತ್ತು ಜ್ವರ ನಿವಾರಕ 14 ಸ್ಥಿರ ಡೋಸ್ ಸಂಯೋಜನೆ ಔಷಧಿಗಳನ್ನು ನಿಷೇಧಿಸಿದ ಕೇಂದ್ರ ಸರಕಾರ

ಮಂಗಳೂರು: ನೋವು ನಿವಾರಿಸಲು ಮತ್ತು ಜ್ವರ ಕಡಿಮೆ ಮಾಡಲು ವೈದ್ಯರು ಶಿಫಾರಸು ಮಾಡುತ್ತಿರುವ ನಿಮೆಸುಲೈಡ್ ಮತ್ತು ಪ್ಯಾರಸಿಟಮೊಲ್ ಡಿಸ್ಪರ್ಸಿಬಲ್ ಮಾತ್ರೆಗಳು ಸೇರಿದಂತೆ 14 ಸ್ಥಿರ ಡೋಸ್ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.

ಈ ಔಷಧಿಗಳು ಚಿಕಿತ್ಸಕ ಗುಣವನ್ನು ಎನ್ನಲು ಯಾವುದೇ ಸಮರ್ಥನೆ ಇಲ್ಲ ಮತ್ತು ಇದರಿಂದ ರೋಗಿಗಳಿಗೆ ಅಪಾಯವಾಗಬಹುದು ಎಂದು ತಜ್ಞರ ಸಮಿತಿ ವರದಿ ಹಿನ್ನಲೆಯಲ್ಲಿ ಸರಕಾರ ಈ ಔಷಧಿಗಳನ್ನು ನಿಷೇಧಿಸಿದೆ.
ಕ್ಲೋಫೆನಿರಮೈನ್ ಮ್ಯಾಲಿಯೇಟ್ ಮತ್ತು ಕೊಡೈನ್ ಸಿರಪ್, ಫಾಲ್ಕೊಡೈನ್, ಪ್ರೊಮೆಥಝೈನ್, ಅಮೊಕ್ಸಿಲಿನ್ ಮತ್ತು ಬ್ರೊಮೆಕ್ಸೈನ್ ಮತ್ತು ಬ್ರೊಮೆಕ್ಸೈನ್ ಡೆಕ್ಸ್ಟ್ರೋಮೆಥಾರ್ಪಾನ್, ಅಮೋನಿಯಂ ಕ್ಲೋರೈಡ್, ಮೆಂಥಾಲ್; ಬ್ರೊಮೆಕ್ಸೈನ್ ಮತ್ತು ಫೆನೈಲ್ಫ್ರಿನ್ ಜೊತೆ ಪ್ಯಾರಾಸಿಟಮಲ್, ಕ್ಲೋರೋಫೆನಿರಮೈನ್, ಗೈಫೆನೆಸಿನ್; ಸಾಲ್ಬುಟಮಾಲ್ ಮತ್ತು ಬ್ರೊಮೆಕ್ಸೈನ್ ಇವು ನಿಷೇಧಿತ ಸಂಯೋಜಿತ ಔಷಧಿಗಳಲ್ಲಿ ಸೇರಿವೆ.

LEAVE A REPLY

Please enter your comment!
Please enter your name here