ಮಂಗಳೂರು: ನಗರದ ಹೊರವಲಯದ ಕಾವೂರು ಸಮೀಪ ಬಿಜಿಎಸ್ ಪ್ರೌಢಶಾಲೆಯ ಬಳಿ ಮನೆಯೊಂದರ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆಯ ಯಜಮಾನ ಸಹಿತ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮನೆಯ ಯಜಮಾನ ಸದಾನಂದ ಪತ್ನಿ ರತ್ನ ಹಾಗೂ ಪುತ್ರಿ ಗಾಯಗೊಂಡಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, 2ರಿಂದ 3ಲಕ್ಷದಷ್ಟು ನಷ್ಟ ಸಂಭವಿಸಿದೆ . ಸ್ಥಳಕ್ಕೆ ಶಾಸಕ ಡಾ.ಭರತ್ ಶೆಟ್ಟಿ, ಮ.ನ.ಪಾ.ಸದಸ್ಯೆ ಸುಮಂಗಲ ರಾವ್ ಮತ್ತಿತರ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರು.