ಕಾಲ್ನಡಿಗೆಯಲ್ಲಿ ಮೆಕ್ಕಾ ತಲುಪಿದ ಯುವಕ

ಮಂಗಳೂರು: ಕಾಲ್ನಡಿಗೆ ಮೂಲಕ 370 ದಿನಗಳಲ್ಲಿ ಸುಮಾರು 8640 ಕಿಲೋಮೀಟರ್ ನಡೆದು ಕೇರಳದ ಮಲಪುರಂ ಜಿಲ್ಲೆಯ ವಲಂಚೇರಿಯ ಶಿಹಾಬ್ ಚೊಟ್ಟೂರು ಪಾಕಿಸ್ತಾನ ಇರಾನ್ ಇರಾಕ್ ಮತ್ತು ಕುವೈಟ್ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ಸೌದಿ ಅರೇಬಿಯಾದ ಮೆಕ್ಕಾ ತಲುಪಿದ್ದಾರೆ.

ಯೂಟ್ಯೂಬರ್ ಆಗಿರುವ ಶಿಹಾಬ್ 2022ರ ಜೂನ್ 2ರಂದು ತಮ್ಮ ಹುಟ್ಟೂರಿನಿಂದ ಈ ಐತಿಹಾಸಿಕ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದರು. 2023ರ ಮೇ 2ನೇ ವಾರದಲ್ಲಿ ಕುವೈತ್ ಗಡಿ ಮೂಲಕ ಸೌದಿ ಅರೇಬಿಯಾಗೆ ಪ್ರವೇಶಿಸಿದ್ದರು. ಮೆಕ್ಕಾಗೂ ಮೊದಲು ಮದೀನಾಗೆ ಭೇಟಿ ನೀಡಿದ್ದ ಶಿಹಾಬ್ ಮದೀನಾ ಮತ್ತು ಮೆಕ್ಕ ನಡುವಿನ 440 ಕಿಲೋಮೀಟರ್ ಅನ್ನು ಕೇವಲ ಒಂಬತ್ತು ದಿನಗಳಲ್ಲಿ ಕ್ರಮಿಸಿದ್ದರು. ಈ ನಡುವೆ ಶಿಹಾಬ್ ತಾಯಿ ಜೈನಬಾ ಕೇರಳದಿಂದ ಹಜ್ ಯಾತ್ರೆ ಮೂಲಕ ಮೆಕ್ಕಾ ತಲುಪಿದ್ದಾರೆ.

LEAVE A REPLY

Please enter your comment!
Please enter your name here