ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯ 83 ರೌಡಿಶೀಟರ್ ಗಳ ಮನೆಗಳಲ್ಲಿ ಪೊಲೀಸರು ಜೂ.11 ರಂದು ದಿಢೀರ್ ತಪಾಸಣೆ ನಡೆಸಿದ್ದಾರೆ.
ಅಕ್ರಮ ಆಯುಧಗಳ ಬಗ್ಗೆ ಶೋಧನೆ ನಡೆಸಿದ ಪೊಲೀಸರು ಯಾವುದೇ ರೌಡಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ತಪಾಸಣೆ ವೇಳೆ ಯಾವುದೇ ಆಯುಧಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಪೋಲಿಸ್ ಇಲಾಖೆ ಆಗಾಗ ಇಂತಹ ತಪಾಸಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇದರಿಂದಾಗಿ ರೌಡಿಗಳ ಮೇಲೆ ನಿರಂತರ ನಿಗಾ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೂ 148 ಮಂದಿ ರೌಡಿಶೀಟರ್, ಹಳೆ ಆರೋಪಿಗಳನ್ನು ತಪಾಸಣೆಗೊಳಪಡಿಸಲಾಗಿದೆ.