ಮಂಗಳೂರು: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತ್ ಪಿಡಿಒ ಗೆ ಮುತ್ತು ಹೂಗಾರ (28) ಎಂಬ ಯುವಕ ಪತ್ರವೊಂದನ್ನು ಬರೆದು ತನಗೆ ಮದುವೆಯಾಗಲು ಕನ್ಯೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ.
ಗುತ್ತಿಗೆದಾರನಾಗಿರುವ ನನಗೆ ತಿಂಗಳಿಗೆ 50 ಸಾವಿರ ರೂಪಾಯಿ ಆದಾಯವಿದ್ದರೂ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ನನಗೆ ಸಹೋದರ, ಸಹೋದರಿ ಯಾರು ಇಲ್ಲ. ಹಳ್ಳಿಹಳ್ಳಿ ಸುತ್ತಾಡಿ ಹೆಣ್ಣು ನೋಡಿದ್ದೇನೆ. ಆದರೆ ಸರಕಾರಿ ಉದ್ಯೋಗ ಇಲ್ಲ ಎಂದು ಯಾರು ಹೆಣ್ಣು ಕೊಡುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಬಂದಿದೆ. ನನಗೆ ಸಂಗಾತಿಯನ್ನು ಹುಡುಕಿಕೊಡಿ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.
ಮದುವೆಯಾಗಲು ಯಾವುದೇ ಜಾತಿಯ ಕನ್ಯೆಯಾದರೂ ಪರವಾಗಿಲ್ಲ ಎಂದು ಮುತ್ತು ಹೂಗಾರ ಹೇಳಿದ್ದಾನೆ. ಮನವಿ ಸ್ವೀಕರಿಸಿರುವ ಪಿಡಿಒ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಮನೆ, ಉದ್ಯೋಗ, ಸೌಕರ್ಯ ಕೊಡಿ ಎಂದು ಸರಕಾರಕ್ಕೆ ಪತ್ರ ಬರೆಯುವವರ ನಡುವೆ ಹೆಣ್ಣು ಹುಡುಕಿ ಕೊಡಿ ಎಂದು ಮುತ್ತು ಹೂಗಾರ ಬರೆದಿರುವ ಪತ್ರ ರಾಜ್ಯಾದ್ಯಂತ ಸದ್ದು ಮಾಡಿದೆ. ಮುತ್ತು ಹೂಗಾರನಿಗೆ ಮುತ್ತಿನಂತಹ ಹೆಣ್ಣು ಸಿಗಲಿ ಎಂದು ಆಶಿಸೋಣ. ಏನಂತೀರಾ ?