ಟೈಟಾನ್‌ ಜಲಾಂತರ್ಗಾಮಿ ಸ್ಪೋಟ – ಜಲಾಂತರ್ಗಾಮಿಯಲ್ಲಿದ್ದ ಐವರೂ ಜಲಸಮಾಧಿ

ಮಂಗಳೂರು: ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಟೈಟಾನ್ ಸಬ್ ಮೆರೀನ್ ಜಲಾಂತರ್ಗಾಮಿ ಸ್ಪೋಟಗೊಂಡಿರುವುದರಿಂದ ಜಲಾಂತರ್ಗಾಮಿಯಲ್ಲಿದ್ದ ಎಲ್ಲಾ ಐವರೂ ಸಾವನ್ನಪ್ಪಿದ್ದಾರೆ ಎಂದು ಈ ಯು ಎಸ್ ಕೋಸ್ಟ್ ಗಾರ್ಡ್ ಹೇಳಿದೆ. 3-4 ದಿನದಿಂದ ಅಮೆರಿಕ ಹಾಗೂ ಕೆನಡಾದ ಕರಾವಳಿಯಲ್ಲಿ ನಿರಂತರವಾಗಿ ನಡೆದ ಕಾರ್ಯಾಚರಣೆ ಕೊನೆಗೂ ಫಲ ನೀಡಲಿಲ್ಲ.

ಸ್ಪೋಟದಿಂದಾಗಿ ಜಲಾಂತರ್ಗಾಮಿಯಲ್ಲಿದ್ದ ಟೈಟಾನ್‌ ನ ನಿರ್ವಹಣಾ ಸಂಸ್ಥೆ ಓಷಿಯನ್‌ ಗೇಟ್‌ ಸಿಇಒ ಸ್ಟಾಕ್ಟನ್ ರಶ್‌, ಪಾಕಿಸ್ತಾನದ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್‌, ಹಮೀಶ್‌ ಹಾರ್ಡಿಂಗ್‌ ಮತ್ತು ಪಾಲ್‌ಹೆನ್ರಿ ನಾರ್ಜಿಯೊಲೆಟ್ ಸಾವನ್ನಪ್ಪಿದ್ದಾರೆ.

ಟೈಟಾನಿಕ್ ಅವಶೇಷದ ಸ್ಥಳದಿಂದ ಸುಮಾರು 1,600 ಅಡಿಗಳಷ್ಟು ಆಳದಲ್ಲಿ ಟೈಟಾನ್ ಜಲಾಂತರ್ಗಾಮಿಯ ಭಾಗಗಳು ಕಂಡುಬಂದಿದೆ ಎಂದು ಅಡ್ಮಿರಲ್ ಮೌಗರ್ ದೃಢಪಡಿಸಿದ್ದಾರೆ. ಕೆನಡಾದ ನ್ಯೂ ಫೌಂಡ್ ಲ್ಯಾಂಡ್ ಕರಾವಳಿ ಭಾಗದಿಂದ 400 ಮೈಲು ದೂರದಲ್ಲಿ ಬೃಹತ್ ಹಡಗು ಟೈಟಾನಿಕ್ ನ ಅವಶೇಷಗಳಿವೆ. 

LEAVE A REPLY

Please enter your comment!
Please enter your name here