ಪ್ರಾಣಿ ಪ್ರಪಂಚ – 7

ಮಕ್ಕಳಿಗಾಗಿ ವಿಶೇಷ ಮಾಹಿತಿ

ಉಪ್ಪು ನೀರಿನ ಮೊಸಳೆ (Crocodylus porosus )

ಉಪ್ಪು ನೀರಿನ ಮೊಸಳೆಯನ್ನು ಇಂಡೋ ಪೆಸಿಫಿಕ್ ಮೊಸಳೆ ಎಂದು ಕರೆಯುತ್ತಾರೆ. ಈ ಮೊಸಳೆಯು ಸದ್ಯ ಜಗತ್ತಿನಲ್ಲಿರುವ ಊರಗ ಅಥವಾ ಸರಿಸೃಪ ಜಾತಿಯ ದೊಡ್ಡ ಪ್ರಾಣಿಯಾಗಿದೆ. ಇದು ಬದುಕಿರುವ ನೆಲದ ಮೇಲಿನ ಹಾಗೂ ನೀರಿನಲ್ಲಿರುವ ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಮಾಂಸಾಹಾರಿ ಪ್ರಾಣಿಯಾಗಿದೆ.

ಈ ಮೊಸಳೆಯು ಭಯಂಕರವಾಗಿದ್ದು ಸಂಧಿಯನ್ನು ಸಾಧಿಸುವ ಅವಕಾಶವಾದಿ ಪ್ರಾಣಿಯಾಗಿದೆ. ತನ್ನ ವಾಸ ಸ್ಥಳದಲ್ಲಿ ಬಂದ ಯಾವ ಪ್ರಾಣಿಯನ್ನು ಬಿಡುವುದಿಲ್ಲ. ಎಲ್ಲ ಜಾತಿಯ ಮೀನುಗಳು, ಪೊದರುಗಳಲ್ಲಿನ ಪ್ರಾಣಿಗಳು, ಸರೀಸೃಪಗಳು, ಹಕ್ಕಿಗಳು, ಸಸ್ತನಿಗಳು, ಸಿಕ್ಕ ಎಲ್ಲಾ ಪ್ರಾಣಿಗಳನ್ನು ತಿನ್ನುತ್ತವೆ. ಪ್ರಾಣಿಗಳನ್ನು ಕ್ರೂರವಾಗಿ ಕೊಲ್ಲುತ್ತವೆ. ಮೇಲೆ ಹಾರಿ ಒಮ್ಮೆಲೇ ಕಚ್ಚುತ್ತವೆ. ಮೊಸಳೆಗಳ ಹಲ್ಲುಗಳು ಮಾಂಸವನ್ನು ಅಗಿಯಲು ಹರಿಯಲು ಬರುವಂತೆ ರಚನೆಯಾಗಿಲ್ಲ. ಬೇಟೆಯ ಮೇಲೆ ಎರಗಿ ಹಿಡಿದು, ನೀರಿನಲ್ಲಿ ಬೀಳಿಸಿ ತಪ್ಪಿಸಿಕೊಳ್ಳದಂತೆ ಬಲವಾಗಿ ಹಿಡಿದುಕೊಂಡು ತಿನ್ನುತ್ತವೆ. ಇವು ಮನುಷ್ಯರಿಗೆ ಅತ್ಯಂತ ಅಪಾಯಕಾರಿ ಪ್ರಾಣಿಗಳಾಗಿವೆ. ಆದರೂ ಮನುಷ್ಯರ ಮೇಲೆ ದಾಳಿ ಮಾಡುವುದು, ಕೊಲ್ಲುವುದು ಅಪರೂಪ.

LEAVE A REPLY

Please enter your comment!
Please enter your name here