ಮಂಗಳೂರು(ಗುಜರಾತ್): ಗುಜರಾತಿನ ಗಿರ್ ಸೋಮನಾಥ ಜಿಲ್ಲೆಯಲ್ಲಿ ಸಿಂಹದ ಹಿಡಿತದಿಂದ ರೈತನೊಬ್ಬ ತನ್ನ ಹಸುವನ್ನು ರಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಸೋಮನಾಥ ಜಿಲ್ಲೆಯ ಕೊಡಿನಾರ್ ತಾಲೂಕಿನ ಅಲಿದಾರ್ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಬಿಜೆಪಿ ಮುಖಂಡ ಕೇಶೊಡ್ ಪುರಸಭೆ ಸದಸ್ಯ ವಿವೇಕ್ ಕೊಟಾಡಿಯ ಟ್ವಿಟ್ ಮಾಡಿ ತಿಳಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ಗಿರ್ ವನ್ಯಜೀವಿ ಅಭಯಾರಣ್ಯದ ಭಾಗದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಏಷ್ಯಾಟಿಕ್ ಸಿಂಹಗಳು ಗಣನೀಯ ಸಂಖ್ಯೆಯಲ್ಲಿದೆ. ಹಸು ತನ್ನನ್ನು ಹಿಡಿದ ಸಿಂಹದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಸ್ಥಳಕ್ಕಾಗಮಿಸಿದ ಹಸುವಿನ ಮಾಲೀಕ ಕೂಗಾಡುವ ಮೂಲಕ ಸಿಂಹವನ್ನು ಓಡಿಸಲು ಯತ್ನಿಸಿದ್ದಾರೆ. ಸಿಂಹ ತನ್ನ ಭೇಟೆಯನ್ನು ಬಿಡಲು ನಿರಾಕರಿಸಿದ್ದರಿಂದ ಮಾಲೀಕ ಕಲ್ಲನ್ನು ಎತ್ತಿ ಸಿಂಹವನ್ನು ಓಡಿಸಿದ್ದಾನೆ. ಈ ಘಟನೆ ಅಲಿದರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ ಎಂದು ವಲಯ ಅರಣ್ಯ ಅಧಿಕಾರಿ ಅಶೋಕ್ ಅಮೀನ್ ತಿಳಿಸಿದ್ದಾರೆ. ಸಿಂಹಗಳು ಅಲಿದರ್ ಸುತ್ತುಮುತ್ತಲಿನ ಪ್ರದೇಶವನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿಕೊಂಡಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ગીર સોમનાથ જિલ્લાના આલીદર ગામે સિંહણ દ્વારા ગાય ઉપર હુમલો કરેલ ત્યારે ખેડૂતે #Credit કિરીટસિંહ ચૌહાણ પોતાની ગાયને એક ખમીરવંતો પ્રયાસ કરેલ અને સફળતા મળેલ.
ખુબ ખુબ સલામ#lion #animalattack #cow #lioness #kingofthejungle #hunt #wildlife #india #nationalgeographic #discovery pic.twitter.com/lDYGub9bfZ— Vivek Kotadiya?? BJP (@VivekKotdiya) June 29, 2023