ಭಾರೀ ಮಳೆಗೆ ಭೂ ಕುಸಿತ-ಕಾರಿನ ಮೇಲೆ ಬಂಡೆ ಬಿದ್ದು 2 ಸಾವು

ಮಂಗಳೂರು(ನಾಗಾಲ್ಯಾಂಡ್): ಎಡೆಬಿಡದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಗುಡ್ಡದಿಂದ ಬಂಡೆಗಳು ಜಾರಿ ಕಾರುಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲಿ ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ.

ದಿಮಾಪುರ ಜಿಲ್ಲೆಯ ಚುಮುಕೆಡಿಮಾದಲ್ಲಿ ಭೂಕುಸಿತ ಸಂಭವಿಸಿದ್ದು ಗುಡ್ಡದಿಂದ ಬೃಹತ್ ಬಂಡೆಗಳು ಉರುಳಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರುಗಳ ಮೇಲೆ ಬಿದ್ದಿದ್ದು ಕಾರುಗಳು ನಜ್ಜುಗುಜ್ಜಾಗಿದೆ. ಬಂಡೆ ಬಿದ್ದ ಕಾರಿನಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಈ ಭೀಕರ ಘಟನೆ ದುರಂತಕ್ಕೀಡಾದ ಕಾರಿನ ಹಿಂದೆ ನಿಂತಿದ್ದ ಮತ್ತೊಂದು ವಾಹನದ ಡ್ಯಾಶ್ ಬೋರ್ಡ್ ಕ್ಯಾಮರದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ವೈರಲಾಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here