ಗಾಳಿಗೆ ಮುರಿದು ಬಿದ್ದ ಬೃಹತ್‌ ಹೋರ್ಡಿಂಗ್-ವಾಹನ, ಕಟ್ಟಡಗಳಿಗೆ ಹಾನಿ

ಮಂಗಳೂರು: ಭಾರಿ ಗಾಳಿ ಮಳೆಗೆ ಕಟ್ಟಡದ ಮೇಲೆ ಹಾಕಲಾಗಿದ್ದ ಬೃಹತ್ ಹೋರ್ಡಿಂಗ್ ಕೆಳಗೆ ಬಿದ್ದು ಕಟ್ಟಡದ ಬಳಿ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿಯಾದ ಘಟನೆ ಜುಲೈ 5 ರಂದು ಬಿಕರ್ನಕಟ್ಟೆಯಲ್ಲಿ ನಡೆದಿದೆ.

ಘಟನೆಯಲ್ಲಿ ಕೆಲವು ಅಂಗಡಿಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹೋರ್ಡಿಂಗ್ ತೆರವುಗೊಳಿಸಿದ್ದಾರೆ. ಘಟನೆಯಿಂದ ನಂತೂರು- ಪಡೀಲ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೋರ್ಡಿಂಗ್ ಮುರಿದು ಬಿದ್ದ ಜಾಗದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here