ಪ್ರಾಣಿ ಪ್ರಪಂಚ -‌ 20

ವಾಮನ ಹಂದಿ (Parcula salvania)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಅವಸಾನದ ಅಂಚಿನಲ್ಲಿರುವ ಕಾಡುಹಂದಿಗಳ ಒಂದು ಪ್ರಭೇದ ಇದಾಗಿದೆ. ಈ ಹಿಂದೆ ಭಾರತ, ನೇಪಾಳ, ಭೂತಾನ್‌ ದೇಶಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಈ ಪಿಗ್ಮಿ ಹಾಗ್‌ ಈಗ ಕೇವಲ ಭಾರತದ ಅಸ್ಸಾಂ ರಾಜ್ಯದಲ್ಲಿ ಮಾತ್ರ ಅಸ್ತಿತ್ವವನ್ನು ಹೊಂದಿದೆ.

ವಿಶ್ವದಲ್ಲಿ ಇದರ ಪ್ರಸ್ತುತ ಸಂಖ್ಯೆಯು 150ಕ್ಕೂ ಕಡಿಮೆ ಇದೆ. ನೋಡಲು 55-71 ಸೆಂ.ಮೀ ಅಗಲ ಹಾಗೂ 12 ಇಂಚು ಅಂದರೆ (20-30 ಸೆಂ.ಮೀ/7.9-11.8 ಇಂಚ್)‌ ನಷ್ಟು ಎತ್ತರ ಹೊಂದಿದ್ದು, 2.5 ಸೆಂ.ಮೀ ಅಥವಾ ಒಂದು ಇಂಚಿನಷ್ಟೇ ಚಿಕ್ಕ ಬಾಲವನ್ನು ಹೊಂದಿರುತ್ತದೆ. 8 ವರ್ಷಗಳ ಕಾಲವಷ್ಟೇ ಆಯುಷ್ಯವನ್ನು ಪಡೆದಿರುವ ಈ ಕಾಡು ಹಂದಿಗಳು 2 ವರ್ಷ ವಯಸ್ಸಿನಲ್ಲಿಯೇ ಸಂತಾನೋತ್ಪತ್ತಿಯ ಸಾಮರ್ಥ್ಯ ಹೊಂದಿ, 100 ದಿನಗಳ ಕಾಲ ಗರ್ಭವನ್ನು ಹೊತ್ತು 3-6 ಮರಿಗಳನ್ನು ಪ್ರತಿ ವರ್ಷದ ಮುಂಗಾರಿನ ಸಮಯದಲ್ಲಿ ಹಾಕುತ್ತದೆ.

ಭೂಮಿಯಲ್ಲಿ ದೊಡ್ಡ ಬಿಲಗಳನ್ನು ಕೊರೆದು ಅದರ ಸುತ್ತಲು ಸೊಪ್ಪು ಸೊದೆಗಳನ್ನು ಪೇರಿಸುತ್ತದೆ. ದಿನದ ಬಿಸಿಲಿನ ಧಗೆಯನ್ನು ತಪ್ಪಿಸಿಕೊಳ್ಳಲು ಹೆಚ್ಚಾಗಿ ಬಿಲಗಳೊಳಗೆ ಅವಿತಿರುತ್ತದೆ. ಆಹಾರಕ್ಕಾಗಿ ಸುತ್ತಮಮುತ್ತಲು ಸಿಗುವ ಗೆಡ್ಡೆಗೆಣಸುಗಳು, ಕ್ರಿಮಿಕೀಟಗಳು, ಚಿಕ್ಕ ಸರಿಸೃಪಗಳು. ಇಲಿಗಳು ಇವುಗಳನ್ನು ಕೊಂದು ತಿನ್ನುತ್ತದೆ. ಹೆಚ್ಚಾಗಿ ಈ ಹಿಂದೆ ದ.ಹಿಮಾಲಯದ ಬೆಟ್ಟದ ತಪ್ಪಲಿನ ಫಲವತ್ತಾದ ಒದ್ದೆ ಹುಲ್ಲುಗಾವಲಿನ ಪ್ರದೇಶಗಳಲ್ಲಿ ಉ.ಪ್ರದೇಶದಿಂದ ಅಸ್ಸಾಂನ ವರೆಗೂ, ನೇಪಾಳದಿಂದ ಉ.ಬಂಗಾಳದವರೆಗೂ ಕಂಡುಬರುತ್ತಿತ್ತು.

ಈಗ ಅರಣ್ಯ ಪ್ರದೇಶಗಳ ಒತ್ತುವರಿಯಿಂದ, ಕಾಡ್ಗಿಚ್ಚಿನಿಂದ, ಕೈಗಾರಿಕೋದ್ಯಮ, ಹುಲ್ಲು ಮೇಯಿಸುವುದು, ವ್ಯವಸಾಯ ಬೇಸಾಯಗಳಿಂದ, ಬೇಟೆಯಾಡುವುದರಿಂದ, ನಾಗರೀಕತೆಯ ಅಸಡ್ಡೆಯಿಂದ ಈ ವಿನಾಶದ ಹಾದಿ ಹಿಡಿಯಬೇಕಾಗಿದೆ.

LEAVE A REPLY

Please enter your comment!
Please enter your name here