ಕಾಡು ಮೊಲ (Caporolagus hispidus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಹಿಸ್ ಪಿಡ್ ಹೇರ್ ಇದನ್ನು ಅಸ್ಸಾಂ ಮೊಲ ಎಂದು ಕರೆಯುತ್ತಾರೆ. ಇದು ದಕ್ಷಿಣ ಏಷ್ಯಾದ ಒಂದು ಸ್ಥಳೀಯ ಜಾತಿ ಹಾಗೂ ಇದರ ಐತಿಹಾಸಿಕ ಶ್ರೇಣಿ ಹಿಮಾಲಯದ ದಕ್ಷಿಣ ತಪ್ಪಲಿನಲ್ಲಿ ಉದ್ದಕ್ಕೂ ವಿಸ್ತರಿಸಿದೆ. ಈ ಮೊಲಗಳ ವಾಸಸ್ಥಾನವು 500 ಕಿ.ಮೀ ಗಳವರೆಗೆ ವಿಸ್ತೀರ್ಣಗೊಂಡಿದೆ. ಈ ಮೊಲಗಳ ಸಂಖ್ಯೆಯು ಬರುಬರುತ್ತಾ ಕಡಿಮೆಯಾಗುತ್ತಿರಲು ಕಾರಣ ಹೆಚ್ಚುತ್ತಿರುವ ಕೃಷಿ, ಪ್ರವಾಹ ನಿಯಂತ್ರಣ ಹಾಗೂ ಮಾನವನ ಅಭಿವೃದ್ಧಿಯಾಗಿದೆ.
ಈ ಹಿಸ್ ಪಿಡ್ ಮೊಲಗಳಿಗೆ ಒರಟಾದ ಹಾಗೂ ಬಿರುಸಾದ ಚರ್ಮವಿರುತ್ತದೆ. ಕಿವಿಗಳು ತುಂಬಾ ಚಿಕ್ಕದಾಗಿದ್ದು, ಚರ್ಮವು ಹಿಂಬದಿಯಲ್ಲಿ ಗಾಢ ಕಂದು ಬಣ್ಣವಾಗಿರುತ್ತವೆ. ಈ ಗಾಢ ಕಂದು ಬಣ್ಣಕ್ಕೆ ಕಾರಣ ಕಪ್ಪು ಮತ್ತು ಕಂದು ಮಿಶ್ರಿತ ಕೂದಲುಗಳು. ಎದೆಯ ಭಾಗವು ಕಂದು ಬಣ್ಣ ಹೊಂದಿದ್ದು, ಹೊಟ್ಟೆಯ ಭಾಗವು ಬಿಳಿಯ ಬಣ್ಣವಾಗಿರುತ್ತವೆ. ಇದರ ಬಾಲವು ಕೂಡ ಕಂದು ಬಣ್ಣವಾಗಿದ್ದು ಬಾಲದ ಉದ್ದವು 30 ಎಂ.ಎಂ ಇರುತ್ತದೆ. ಈ ಮೊಲಗಳಲ್ಲಿ ಗಂಡು ಮೊಲಗಳ ತೂಕವು ಸುಮಾರು 1,810 ರಿಂದ 2,610 ಗ್ರಾಂ ಸರಾಸರಿ 2,248 ಗ್ರಾಂ ಮತ್ತು ಹೆಣ್ಣು ಮೊಲಗಳು 2,518 ಗ್ರಾಂ ಇರುತ್ತದೆ.
ಮುಂಭಾಗದ ಮೂಳೆಗಳು ಬಹಳ ಅಗಲವಾಗಿರುತ್ತದೆ. ಮೂಗಿನ ಉದ್ದ ಸಾಮಾನ್ಯವಾಗಿ 85 ಎಂ.ಎಂ (3-3 ಇಂಚ್) ಇರುತ್ತದೆ. ಸಾಮಾನ್ಯವಾಗಿ ಇದರ ಉದ್ದ 476 ಮಿ.ಮಿ ತಲೆಯಿಂದ ಬಾಲದವರೆಗೆ ಇರುತ್ತದೆ.
ಈ ಮೊಲಗಳ ಐತಿಹಾಸಿಕ ಶ್ರೇಣಿಯ ಉತ್ತರ ಪ್ರದೇಶದಿಂದ ದಕ್ಷಿಣ ನೇಪಾಳ, ಉತ್ತರ ಶ್ರೇಣಿಯ ಪಶ್ಚಿಮ ಬಂಗಾಳದಿಂದ ಅಸ್ಸಾಂ ಮತ್ತು ಬಾಂಗ್ಲಾದೇಶದವರೆಗಿದೆ. ಈಗ ಇದರ ವಿತರಣೆಯು ಭಾರತ, ಬಾಂಗ್ಲಾ ದೇಶ, ನೇಪಾಳ ಹಾಗೂ ಬೂತಾನ್ನಲ್ಲಿ ವಿರಳವಾಗಿದೆ. ಇವು ಎತ್ತರದ ಹುಲ್ಲುಗಾವಲುಗಳಲ್ಲಿ, ಜಿವುಗು ಪ್ರದೇಶಗಳಲ್ಲಿ ವಾಸಿಸುತ್ತವೆ. ನದಿಯ ಪಕ್ಕದ ಹುಲ್ಲುಗಳಿರುವ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತದೆ.
ಸೂಕ್ಷ್ಮ ಪಂಟ ವನ್ಯಜೀವಿ ಪ್ರದೇಶದ ಹುಲ್ಲುಗಾವಲುಗಳಲ್ಲಿರುವ ಇದರ ಜನಸಂಖ್ಯೆಯು ಅಂತರಾಷ್ಟ್ರೀಯ ಮಹತ್ವವನ್ನು ಪಡೆದಿದೆ. ಹಿಸ್ ಪಿಡ್ ಮೊಲಗಳು ನಸುಕು ಮತ್ತು ಮಸುಕಿನಲ್ಲಿ ಬಹಳ ಚುರುಕಾಗಿರುತ್ತವೆ. ಇದರ ಸಂತಾನೋತ್ಪತ್ತಿಯ ಬಗ್ಗೆ ಇದುವರೆಗೆ ಸಿಕ್ಕ ಮಾಹಿತಿಗಳ ಪ್ರಕಾರ ಇದರ ಸಾಮಾನ್ಯವಾದ ಅಳತೆಯು ಅಲ್ಪಪ್ರಮಾಣವಿದ್ದು ಅಥವಾ ಸಣ್ಣದಾಗಿರುವುದು.