ಫೋರ್ಬ್ಸ್ 100 ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ಮೂಲದ ನಾಲ್ವರಿಗೆ ಸ್ಥಾನ

ಮಂಗಳೂರು (ವಾಷಿಂಗ್ಟನ್): ಅಮೇರಿಕಾದ 100 ಅತೀ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ಮೂಲದ ಸಾಧಕ ಮಹಿಳೆಯರಾದ ಜಯಶ್ರೀ ಉಳ್ಳಾಲ್, ಇಂದಿರಾ ನೂಯಿ, ನೀರಜಾ ಸೇಥಿ ಮತ್ತು ನೇಹ ನರ್ಖಡೆ ಸ್ಥಾನ ಪಡೆದಿದ್ದಾರೆ.‌

ಅರಿಸ್ಟ ನೆಟ್ವರ್ಕ್ ಎಂಬ ಕಂಪ್ಯೂಟರ್ ನೆಟ್ವರ್ಕಿಂಗ್ ಸಂಸ್ಥೆಯ ಸಿಇಓ ಮತ್ತು ಅಧ್ಯಕ್ಷರಾಗಿರುವ ಜಯಶ್ರೀ ಉಳ್ಳಾಲ್ ಪಟ್ಟಿಯಲ್ಲಿ 15ನೇ ಸ್ಥಾನ ಪಡೆದಿದ್ದು ಭಾರತೀಯ ಮೂಲದ ಮಹಿಳೆಯರಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಟಿ ಸಲಹೆ ಮತ್ತು ಹೊರಗುತ್ತಿಗೆ ನಿರ್ವಹಿಸುವ ಸಿಂಟೆಲ್ ಸಂಸ್ಥೆಯ ಸಹ ಸಂಸ್ಥಾಪಕಿ ನೀರಜಾ ಸೇಥಿ ಈ ಪಟ್ಟಿಯಲ್ಲಿ 25ನೇ ಸ್ಥಾನದಲ್ಲಿದ್ದಾರೆ. ವಂಚನೆ ಪತ್ತೆ ಹಚ್ಚುವ ಅಸಿಲರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ನೇಹ ನರ್ಖಡೆ, ಒಸಿಲಿಯೆ ಎಂಬ ಸಂಸ್ಥೆಯ ಸಿಇಓ ಕೂಡ ಆಗಿದ್ದಾರೆ. ಇವರು ಪಟ್ಟಿಯಲ್ಲಿ 50ನೇ ಸ್ಥಾನದಲ್ಲಿದ್ದಾರೆ. ಪೆಪ್ಸಿಕೋ ಸಂಸ್ಥೆಯ ಮಾಜಿ ಅಧ್ಯಕ್ಷೆ ಮತ್ತು ಸಿಇಓ ಆಗಿದ್ದ ಇಂದಿರಾ ನೂಯಿ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here